ಬೆಂಗಳೂರು: ಸಮಕಾಲೀನ ಪತ್ರಿಕಾ ಕ್ಷಿತಿಜದಲ್ಲಿ ಮಿನುಗುತ್ತಿರುವ ಮುಂಚೂಣಿ ಆಧ್ಯಾತ್ಮಿಕ ಬರಹಗಾರ ಡಾ.ಗುರುರಾಜ ಪೋಶೆಟ್ಟಿಹಳ್ಳಿ. 'ವಂದೇ ಗುರು ಪರಂಪರಾಮ್' ಕೃತಿಯ ಮೂಲಕ ಸಾಹಿತ್ಯದ ನೆಲೆಯಲ್ಲಿ ಈಗಾಗಲೇ ಹೆಜ್ಜೆ ಗುರುತನ್ನು ಮೂಡಿಸಿದ್ದಾರೆ. ದಾಸ ಸಾಹಿತ್ಯ ನೆಚ್ಚಿನ ವಿಷಯ; ಆ ಕುರಿತು ಸಂಶೋಧನೆಯಲ್ಲೂ ಆಸಕ್ತ. ಅಂಕಣಕಾರರಾಗಿ ಜನಮನ್ನಣೆ ಗಳಿಸಿರುವ ಅವರು ಸಾಮಾಜಿಕ ಕಾರ್ಯಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಲಾಪ್ರೇಮಿ.
ನಾಡಿನ ವಿವಿಧ ಪತ್ರಿಕೆಗಳಲ್ಲಿ ಎರಡು ದಶಕಗಳಿಂದ ಸಾವಿರಾರು ಆಧ್ಯಾತ್ಮಿಕ ಬರವಣಿಗೆಯ ಮುಖಾಂತರ ಜನಜಾಗೃತಿ ಮೂಡಿಸುತ್ತಿರುವ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ಅಪ್ರತಿಮ ಸೇವೆಯನ್ನು ಗುರುತಿಸಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಅಕಾಡೆಮಿ ಫಾರ್ ಸ್ಪಿರುಚ್ಯುಲ್ ಸೈಂಟಿಸ್ಟ್ ವತಿಯಿಂದ 2021ನೇ ಸಾಲಿನ ಪ್ರತಿಷ್ಠಿತ ‘ಡೈನಾಮಿಕ್ ಸ್ಪಿರಿಚ್ಯುಲ್ ಮತ್ತು ವೆಲ್‍ನೆಸ್ ಪ್ರಶಸ್ತಿ’ಯನ್ನು ಇಂಡಿಯನ್ ಸ್ಪಿರಿಚ್ಯುಲ್ ಕೌನ್ಸಿಲ್ ನಿರ್ದೇಶಕ ಡಾ.ಬಿ.ವಿ.ಬಿ.ಸಾರಾ ಅಯ್ಯರ್ ರವರು ನೀಡಿ ಗೌರವಿಸಿದರು.
Post a Comment