ಮೈಸೂರು : ಕಾರು- ಬೈಕ್ ಅಪಘಾತ ಸಂಭವಿಸಿದ್ದು, ಇದರಿಂದ ಸಹೋದರರು ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಇಲವಾಲ ಸಮೀಪದ ಹೊಸರಾಮನಹಳ್ಳಿ ಸೇತುವೆ ಬಳಿ ಈ ಘಟನೆ ನಡೆದಿದೆ. ಹೊಸಕೋಟೆ ಗ್ರಾಮದ ವಿಶ್ವ (21), ವಿಷ್ಣು (19) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.
ಹೊಸಕೋಟೆಯಿಂದ ಬೈಕ್ ಮೂಲಕ ಕೆ.ಆರ್.ನಗರಕ್ಕೆ ಸಹೋದರರು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರಿಗೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದರಿಂದ ಅವರು ಸಾವನ್ನಪ್ಪಿದ್ದಾರೆ. ಕಾರು ಗುದ್ದಿದ ರಭಸಕ್ಕೆ ಕೆಆರ್ ಎಸ್ ಹಿನ್ನೀರಿಗೆ ಬೈಕ್ ನಲ್ಲಿದ್ದ ಒಬ್ಬ ಹಾರಿದ್ದಾನೆ. ಮತ್ತೊಬ್ಬ ಸಹೋದರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಕಾವೇರಿ ಹಿನ್ನೀರಿನಲ್ಲಿ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
author dissertation
Post a Comment