ಸುಳ್ಯ: ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ವತಿಯಿಂದ ನ. 14ರಂದು ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ಯಾನ ಮಂದಿರದಲ್ಲಿ ಮಕ್ಕಳಿಗಾಗಿ ಭಕ್ತಿಗೀತೆ ಸಂಗೀತ ಸ್ಪರ್ಧೆಯು ಜರುಗಿತು. ಕಾರ್ಯಕ್ರಮವನ್ನು ಸುಳ್ಯದ ತಹಸೀಲ್ದಾರ್ ಕು| ಅನಿತಾ ಲಕ್ಷ್ಮಿ ಅವರು ಉದ್ಘಾಟಿಸಿದರು.
ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗದ ಅಧ್ಯಕ್ಷರು ಮತ್ತು ಖ್ಯಾತ ಜ್ಯೋತಿಷಿ ಎಚ್. ಭೀಮರಾವ್ ವಾಷ್ಠರ್ ಅವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಉಮಾದೇವಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು.
ಸುಳ್ಯದ ಸರ್ಕಲ್ ಇನ್ಸ್ಪೆಕ್ಟರ್ ನವೀನ ಚಂದ್ರ ಜೋಗಿ ಅವರು ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಿದರು. ತಾಂತ್ರಿಕ ಕೃಷಿ ಅಧಿಕಾರಿಗಳಾದ ಮೋಹನ್ ನಂಗಾರುರವರು ವೇದಿಕೆಯಲ್ಲಿದ್ದ ಗಣ್ಯರನ್ನು ಸನ್ಮಾನಿಸಿ ಶುಭ ಹಾರೈಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಹ ಸಂಚಾಲಕರಾದ ಉಮೇಶ್ ಆಚಾರ್ಯ ಜಟ್ಟಿಪಳ್ಳ ರವರು ಮುಖ್ಯ ಅತಿಥಿಗಳಾಗಿದ್ದರು. ಸಂಗೀತ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದ ಗಾಯಕ ಮತ್ತು ನಿರ್ದೇಶಕರಾದ ಪ್ರವೀಣ್ ಜಯ ವಿಟ್ಲ ಅವರಿಗೆ ಸಂಗೀತ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ದಿಯಾ ರಾವ್ ಮಂಗಳೂರು ಮತ್ತು ಅಸ್ಮಿತ್ ಎ ಜೆ ಮಂಗಳೂರು ಹಾಗೂ ಹರ್ಷಿತಾ ಕೆ ಎಸ್ ಸುಳ್ಯ ಅವರಿಗೆ ಬಹುಮಾನದ ಪ್ರಶಸ್ತಿ ಪತ್ರ ಮತ್ತು ಟ್ರೋಫಿಗಳನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಸ್ಪರ್ಧೆಯಲ್ಲಿ ಪೂಜಾಶ್ರೀ ಬಳ್ಳಡ್ಕ, ಪಲ್ಲವಿ ಆಲೆಟ್ಟಿ, ವಿಶ್ವದೀಪ್ ಕುಂದಲ್ಪಾಡಿ, ರಿತಿಕಾ ರಮೇಶ್ ಪಿಲಿಕೋಡಿ, ಮೌಲ್ಯ ಮಜಿಕ್ಕೋಡಿ, ಆಶಾ ರಮೇಶ್, ಯಜೀಶ್ ಕಡಂಬಾರ್, ಬಬಿತಾ ಕಡಂಬಾರ್, ಸ್ನಿಗ್ಧ ಎನ್ ಎಸ್ ಸುಳ್ಯ, ಗ್ರೀಷ್ಮಾ ಪೆರ್ಲಂಪಾಡಿ, ಅವನಿ ಎಮ್ ಎಸ್ ಸುಳ್ಯ, ಸನತ್ ಐವರ್ನಾಡು, ಇಶಾರ ಆಲೆಟ್ಟಿ, ಅಶ್ವಿಜ್ ಆತ್ರೇಯ ಸುಳ್ಯ, ತೇಜಸ್ ವಿಟ್ಲ ಮತ್ತು ಪೂರ್ಣಿಮಾ ಪೆರ್ಲಂಪಾಡಿ ಭಾಗವಹಿಸಿದ್ದರು.
ಭಾಗವಹಿಸಿದ ಎಲ್ಲರಿಗೂ ಅಭಿನಂದನಾ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಹರಿಪ್ರಸಾದ್ ಪಿ ಸುಳ್ಯ ರವರು ಪ್ರಾರ್ಥನೆ ಹಾಡಿದರು. ಸುಮಂಗಲ ಲಕ್ಷ್ಮಣ ಕೋಳಿವಾಡ ರವರು ವಂದನೆ ಸಲ್ಲಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
إرسال تعليق