ಮಂಜೇಶ್ವರ: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ ಯೋಜನೆಯಡಿಯಲ್ಲಿ ಮಂಜೇಶ್ವರ ತಾಲೂಕು ಮೀಂಜ ಗ್ರಾಮದ ಕೊಳಚಪ್ಪು ನಿವಾಸಿ ಕ್ಯಾಂಪ್ಕೋ ಸಂಸ್ಥೆಯ ಸದಸ್ಯರಾದ ಬಿ. ಸತ್ಯವತಿ ಭಟ್ ಇವರ ಮಗ ಮಹಾಬಲ ತಿಲಕರ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವನ್ನು ನೀಡಲಾಯಿತು.
ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಅವರು ರೂಪಾಯಿ 2 ಲಕ್ಷದ ಚೆಕ್ ಅನ್ನು ಹಸ್ತಾಂತರಿಸಿದರು. ನಿರ್ದೇಶಕ ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಪ್ರಾದೇಶಿಕ ವ್ಯವಸ್ಥಾಪಕ ಗಿರೀಶ್ ಇ., ಬಾಯಾರು ಶಾಖಾ ಸಿಬ್ಬಂದಿ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment