ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುತ್ತೂರು: ಅಂಬಿಕಾದಲ್ಲಿ ಶಿಕ್ಷಕ- ರಕ್ಷಕ ಸಂಘದ ಸಭೆ

ಪುತ್ತೂರು: ಅಂಬಿಕಾದಲ್ಲಿ ಶಿಕ್ಷಕ- ರಕ್ಷಕ ಸಂಘದ ಸಭೆ


ಪುತ್ತೂರು: ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಸಂಸ್ಕಾರ ಭರಿತ ಶಿಕ್ಷಣ, ಯೋಗ, ಭಗವದ್ಗೀತಾ ಪಠಣ ಮುಂತಾದವುಗಳ ಜೊತೆಗೆ NEET, CET, NDA, NATA ಕೋಚಿಂಗ್ ತರಗತಿಗಳೂ ಚೆನ್ನಾಗಿ ನಡೆಯುತ್ತಾ ಇದೆ. ಪೋಷಕರೆಲ್ಲಾ ತಮ್ಮ ಮಕ್ಕಳ ಜೊತೆಗಿದ್ದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯ ಜೊತೆಗೆ ವಿದ್ಯಾಲಯದ ಶ್ರೇಯೋಭಿವೃದ್ಧಿಗೂ ಸಹಕರಿಸಿ ಎಂದು ಪುತ್ತೂರಿನ ಖ್ಯಾತ ಹೃದಯ ತಜ್ಞ ಡಾ. ಜೆ.ಸಿ.ಅಡಿಗ ಅವರು ಹೇಳಿದರು.


ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಇಲ್ಲಿಯ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾಗಿ ಅವರು ಪೋಷಕರ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಪಿಯುಸಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧಾತ್ಮಕ ಸ್ಪರ್ಧೆಗಳಿಗೆ ತಯಾರಿ ನಡೆಸಲು ಆಡಳಿತ ಮಂಡಳಿ, ಉಪನ್ಯಾಸಕರು ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದ್ದೇವೆ. ಪೋಷಕರು ಈ ಅವಧಿಯಲ್ಲಿ ತಮ್ಮ ವಿದ್ಯಾರ್ಥಿಗಳ ಜೊತೆಗೆ ಅಧಿಕ ಸಮಯವನ್ನು ಕಳೆದು ಅವರ ಫಲಿತಾಂಶ ಇನ್ನೂ ಉತ್ತಮ ರೀತಿಯಲ್ಲಿ ಪಡೆಯಲು ಅವರನ್ನು ಮಾನಸಿಕವಾಗಿ ಸಿದ್ಧಗೊಳಿಸಬೇಕು. ಪೋಷಕರು ಈ ರೀತಿ ನಮ್ಮೊಂದಿಗೆ ಕೈ ಜೋಡಿಸಿದಾಗ ನಿರೀಕ್ಷೆಗೂ ಮೀರಿ ಮುಂದುವರಿಯುತ್ತಾರೆ ಎಂದು ಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜರು ಪೋಷಕರಿಗೆ ಭರವಸೆಯ ಮಾತುಗಳನ್ನಾಡಿದರು.


ವಿದ್ಯಾಲಯದಲ್ಲಿ ಸಿಗುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಅದನ್ನು ಸದುಪಯೋಗಿಸುವ ಬಗ್ಗೆ ಸಂಸ್ಥೆಯ ಖಜಾಂಜಿ ರಾಜಶ್ರೀ ನಟ್ಟೋಜ ಪೋಷಕರಿಗೆ ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾದ ಸತ್ಯಜಿತ್ ಉಪಾಧ್ಯಾಯರು ಎಲ್ಲರನ್ನೂ ಸ್ವಾಗತಿಸಿ ಉಪಾನ್ಯಾಸಕರನ್ನು ಪೋಷಕರಿಗೆ ಪರಿಚಯಿಸಿದರು. ಹಾಗೂ ಮುಕ್ತ ಸಂವಾದ ಅವಧಿಯಲ್ಲಿ ಪೆÇೀಷಕರ ಸಂಶಯಗಳಿಗೆ ಉತ್ತರಿಸಿದರು. ಉಪನ್ಯಾಸಕರೆಲ್ಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದರು.


ವಿದ್ಯಾರ್ಥಿನಿಯರಾದ ಶ್ವೇತಾ, ಸ್ಮೃತಿ ಪ್ರಾರ್ಥಿಸಿದರು. ರಸಾಯನಶಾಸ್ತ್ರ ಉಪನ್ಯಾಸಕಿ ಚೈತ್ರಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ವಂದಿಸಿದರು. ಕನ್ನಡ ಉಪನ್ಯಾಸಕಿ ಜಯಂತಿ, ಗಣಕ ವಿಜ್ಞಾನ ಉಪನ್ಯಾಸಕ ಪ್ರದೀಪ್ ಹಾಗೂ ರವಿಚಂದ್ರ ಪಿ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post