ಮಂಗಳೂರು: ನವಂಬರ್ 1ರಂದು ಬೆಂಗಳೂರಿನಲ್ಲಿ ಜರಗಿದ ರಾಜ್ಯೋತ್ಸವ ಸಮಾರಂಭದಲ್ಲಿ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಹೊರನಾಡ ಕನ್ನಡಿಗ, ಮುಂಬಯಿ 'ಕರ್ನಾಟಕ ಮಲ್ಲ' ಕನ್ನಡ ದೈನಿಕದ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಇತ್ತೀಚೆಗೆ ಮಂಗಳೂರಿನಲ್ಲಿ ಅಭಿನಂದಿಸಲಾಯಿತು.
ನಗರದ ಖಾಸಗಿ ಸುದ್ದಿವಾಹಿನಿ ನಮ್ಮ ಕುಡ್ಲ ಕಚೇರಿ ಆವರಣದಲ್ಲಿ ವಾಹಿನಿಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಅವರು ಪಾಲೆತ್ತಾಡಿಯವರಿಗೆ ಶಾಲು ಹೊದಿಸಿ, ಸ್ಮರಣಿಕೆಯಿತ್ತು ಗೌರವಿಸಿದರು. ನಮ್ಮಕುಡ್ಲ 'ರಂಗ ವಿಹಾರ'ದ ಕಾರ್ಯನಿರ್ವಾಹಕ ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ನುಡಿಗಳನ್ನಾಡಿದರು.
ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ಯಾಡಿ, ನಮನ ಫ್ರೆಂಡ್ಸ್ ಸ್ಥಾಪಕ ಪ್ರಭಾಕರ್ ಬೆಳುವಾಯಿ, ವಾಸ್ತುತಜ್ಞ ನವೀನ್ ಚಂದ್ರ ಸನಿಲ್, ಕರ್ನಾಟಕ ಮಲ್ಲ ಪತ್ರಿಕಾ ಬಳಗದ ನವೀನ್ ಕೆ. ಇನ್ನ ಮತ್ತು ದಿನೇಶ್ ಕುಲಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ಪಾಲೆತ್ತಾಡಿಯವರ ಜೀವನ ಯಾನದ ಬಗ್ಗೆ ಮಾತು- ಕಥೆ ಜರಗಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment