ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಸೆಪ್ಟೆಂಬರ್ ತಿಂಗಳಲ್ಲಿ 30 ದಿನಗಳಲ್ಲಿ ಅತೀ ಹೆಚ್ಚು ಚುಟುಕುಗಳನ್ನು ಬರೆಯುವ ಜಿಲ್ಲಾಧ್ಯಕ್ಷರೊಂದಿಗೆ ಭೋಜನ ಸಾಹಿತ್ಯ ಚಟುವಟಿಕೆಯಲ್ಲಿ 372 ಚುಟುಕುಗಳನ್ನು ಬರೆದು ವಿಜೇತರಾದ ಹಿರಿಯ ಕವಿ ಡಾ. ಸುರೇಶ್ ನೆಗಳಗುಳಿ ಅವರನ್ನು ಹೋಟೆಲ್ ಓಶಿಯನ್ ಪರ್ಲ್‌ನಲ್ಲಿ ವಿಶೇಷ ಸನ್ಮಾನವಿತ್ತು ಪುರಸ್ಕರಿಸಲಾಯಿತು.
ಹರೀಶ ಸುಲಾಯ ಒಡ್ಡಂಬೆಟ್ಟು ಮತ್ತು ರಘು ಇಡ್ಕಿದು ಅವರು ಸನ್ಮಾನಿಸಿದರು. ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ಜೊತೆ ಡಾ. ಸುರೇಶ್ ನೆಗಳಗುಳಿ, ಅವರ ಮಗ ಸುಹಾಸ್, ಮಂಗಳೂರು ತಾಲೂಕು ಚುಸಾಪ ಅಧ್ಯಕ್ಷ ಕಾ.ವೀ. ಕೃಷ್ಣಾದಾಸ್, ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು, ಜತೆ ಕಾರ್ಯದರ್ಶಿ ವೆಂಕಟೇಶ್ ಗಟ್ಟಿ, ಕೋಶಾಧಿಕಾರಿ ಲತೀಶ್ ಎಂ ಸಂಕೊಳಿಗೆ, ಸಲಹೆಗಾರರಾದ ಕವಿ ರಘು ಇಡ್ಕಿದು, ರೇಮಂಡ್ ಡಿಕುನಾ ಭೋಜನ ಕೂಟದಲ್ಲಿ ಭಾಗಿಯಾದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق