ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವರದಕ್ಷಿಣೆ ಕಿರುಕುಳ; ಮಹಿಳೆ ಮತ್ತು ಮಗಳು ಆತ್ಮಹತ್ಯೆಗೆ ಶರಣು

ವರದಕ್ಷಿಣೆ ಕಿರುಕುಳ; ಮಹಿಳೆ ಮತ್ತು ಮಗಳು ಆತ್ಮಹತ್ಯೆಗೆ ಶರಣು



 ಕಲಬುರಗಿ: ಪಂಚಶೀಲ ನಗರದಲ್ಲಿ ಸೋಮವಾರ ಮಹಿಳೆಯೊಬ್ಬರು ಅವರ ಇಬ್ಬರು ಮಕ್ಕಳಿಗೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದು, ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ದೀಕ್ಷಾ ವಸಂತರಾವ್ ಶರ್ಮಾ (27 ವರ್ಷ), ಹಾಗೂ ಆಕೆಯ ಮಗಳು ಸಿಂಚನಾ (2 ವರ್ಷ), ಮೃತಪಟ್ಟವರು. ಪುತ್ರ ಧನಂಜಯ (4 ವರ್ಷ) ಈತನಿಗೆ ಗಾಯಗಳಾಗಿವೆ. ವರದಕ್ಷಿಣೆ ಕಿರುಕುಳವೇ ಕಾರಣ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಐದು ವರ್ಷಗಳ ಹಿಂದೆ ದೀಕ್ಷಾ-ವಸಂತರಾವ್ ಶರ್ಮಾರ ಮದುವೆಯಾಗಿತ್ತು. ಇತ್ತೀಚೆಗೆ ತವರು ಮನೆಯಿಂದ ಹಣ ತರುವ ವಿಚಾರದಲ್ಲಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಮನೆಯಲ್ಲಿ ಪತಿ ಇಲ್ಲದ ವೇಳೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆಯ ಮನೆಯವರು ಮೂಲತಃ ತೊನಸನಹಳ್ಳಿ ಗ್ರಾಮದವರು. ಇತ್ತೀಚೆಗೆ ಕಾಳಗಿ ಪಟ್ಟಣದಲ್ಲಿ ವಾಸವಾಗಿದ್ದರು.

ಈ ಬಗ್ಗೆ ಮಹಿಳೆಯರ ಪೋಷಕರು ನೀಡಿದ ದೂರಿನ ಮೇರೆಗೆ ಗಂಡ ವಸಂತರಾವ್, ಅತ್ತೆ ನೀಲಮ್ಮ, ವಿಠ್ಠಲ ಎಂಬುವವರು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರಕಿವೆ.

0 تعليقات

إرسال تعليق

Post a Comment (0)

أحدث أقدم