ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಾಗೃತಿ ಅರಿವು ಸಪ್ತಾಹ-2021

ಜಾಗೃತಿ ಅರಿವು ಸಪ್ತಾಹ-2021



ಮಂಗಳೂರು: ಗೃಹರಕ್ಷಕದಳ ಮತ್ತು ಕೇಂದ್ರ ಕಚೇರಿಯ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿ, ಮೇರಿಹಿಲ್, ಮಂಗಳೂರು ಇಲ್ಲಿ ‘ಜಾಗೃತಿ ಅರಿವು ಸಪ್ತಾಹ-2021’ ಇಂದು ಆಚರಿಸಲಾಯಿತು.


ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಬದ್ಧರಾಗಿರುವುದಾಗಿ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ಬೆಂಬಲಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್‍ ಚೂಂತಾರು ಇವರ ಸಮ್ಮುಖದಲ್ಲಿ “ಜಾಗೃತಿ ಅರಿವು ಸಪ್ತಾಹ-2021”ವನ್ನು ಆಚರಿಸಲಾಯಿತು.


ಭ್ರಷ್ಟಾಚಾರ ನಿರ್ಮೂಲನಾ ಪ್ರತಿಜ್ಞೆಯಲ್ಲಿ ಕಛೇರಿಯ ಉಪಸಮಾದೇಷ್ಟರಾದ ರಮೇಶ್, ಪ್ರಥಮ ದರ್ಜಿ ಸಹಾಯಕಿ ಅನಿತಾ ಟಿ.ಎಸ್, ದಲಾಯತ್ ಮೀನಾಕ್ಷಿ ಹಾಗೂ ಗೃಹರಕ್ಷಕರಾದ ದಿವಾಕರ್, ಸುಲೋಚನ, ಜಯಲಕ್ಷ್ಮಿ, ದುಷ್ಯಂತ್ ಇವರುಗಳು ಪ್ರತಿಜ್ಞೆಯನ್ನು ಮಾಡಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم