ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೀರಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು

ನೀರಲ್ಲಿ ಈಜಲು ಹೋದ ಇಬ್ಬರು ಬಾಲಕರು ನೀರುಪಾಲು

 


ರಾಮನಗರ: ಬಿಡದಿಯ ಕೆಂಚನಕುಪ್ಪೆ ಬಳಿಯ ಕುಂಬಾರಕಟ್ಟೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಶಾಲಾ ಬಾಲಕರು ಸಾವನ್ನಪ್ಪಿದ್ದಾರೆ.


ಬಿಡದಿಯ ಸರ್ಕಾರಿ ಶಾಲೆಯ 5 ನೇ ತರಗತಿ ವಿದ್ಯಾರ್ಥಿಗಳಾದ ಕೌಶಿಕ್(12)ವರ್ಷ ಮತ್ತು ಕರ್ಣ(11) ವರ್ಷ ಮೃತ ಬಾಲಕರು.

ಇತ್ತೀಚೆಗೆ ಸುರಿದ ಮಳೆಯಿಂದ ಕುಂಬಾರಕಟ್ಟೆ ಭರ್ತಿಯಾಗಿತ್ತು. ಗುರುವಾರ ಮಧ್ಯಾಹ್ನ ಕಟ್ಟೆಯಲ್ಲಿ ಈಜಾಡುತ್ತಿದ್ದ ಬಾಲಕರನ್ನು ಸ್ಥಳೀಯರು ಗದರಿಸಿ ಮನೆಗೆ ಕಳುಹಿಸಿದ್ದರು.

ಸಂಜೆ ವೇಳೆಗೆ ಮತ್ತೆ ವಾಪಸ್ ಬಂದ ಬಾಲಕರು ಕಟ್ಟೆಯಲ್ಲಿ ಈಜಾಡಲು ಹೋಗಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು.


ಶುಕ್ರವಾರ ಮುಂಜಾನೆ ನುರಿತ ಈಜುಗಾರರಿಂದ ಬಾಲಕರ ಮೃತ ದೇಹಗಳನ್ನು ಹೊರ ತೆಗೆಯಲಾಯಿತು.

ಶವಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಲಾಗಿದೆ.


0 تعليقات

إرسال تعليق

Post a Comment (0)

أحدث أقدم