ಧಾರವಾಡ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ದಾಂಡೇಲಿ ಸಂಸ್ಥೆಯು 30 ದಿನಗಳ ಜೆಸಿಬಿ ಆಪರೇಟರ್ ಟ್ರೈನಿಂಗ್ ಆಯೋಜನೆ ಮಾಡಿದೆ.
18 ರಿಂದ 45 ವಯೋಮಿತಿಯ ಯುವಕರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿ ಅವಶ್ಯಕತೆ ಈಗ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನೊಳಗೊಂಡ ಅರ್ಜಿಯನ್ನು ಅಕ್ಟೋಬರ್ 25 ರ ಒಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟ್ ವಿಸ್ತರಣಾ ಕೇಂದ್ರ ಹಸನಮಾಳ, ದಾಂಡೇಲಿ-581325 ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9449782425, 6363429889 ಸಂಪರ್ಕಿಸಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
إرسال تعليق