ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುನೀತ್ ರಾಜ್‍ಕುಮಾರ್ ಅವರ ಮೂವರು ಅಭಿಮಾನಿಗಳು ಕೀಟನಾಶಕ ಸೇವಿಸಿ ಸಾವು

ಪುನೀತ್ ರಾಜ್‍ಕುಮಾರ್ ಅವರ ಮೂವರು ಅಭಿಮಾನಿಗಳು ಕೀಟನಾಶಕ ಸೇವಿಸಿ ಸಾವು


 

ಸಿಂಧನೂರು ; ಪುನೀತ್‌ ರಾಜ್‌ಕುಮಾರ್‌ ಅವರ ಸಾವಿನಿಂದ ಬೇಸರಗೊಂಡ ಮೂವರು ಅಭಿಮಾನಿಗಳು ಪ್ರತ್ಯೇಕ ಕಡೆಗಳಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ಸಿಂಧನೂರು ತಾಲ್ಲೂಕಿನ ಹಾರಾಪುರ ಗ್ರಾಮದ ಬಸನಗೌಡ (28), ಯಾಪಲಪರ್ವಿ ಗ್ರಾಮದ ಮೊಹ್ಮದ್‌ ರಫಿ (28) ಹಾಗೂ ಆರ್‌.ಎಚ್‌.ಕ್ಯಾಂಪ್‌-2 ನಿವಾಸಿ ಅನೂಪ್‌ಕುಮಾರ್‌ (25) ಅವರು ತಮ್ಮ ಮನೆಗಳಲ್ಲಿಯೇ ಶುಕ್ರವಾರ, ಭತ್ತಕ್ಕೆ ಸಿಂಪಡಿಸಲು ತಂದಿಟ್ಟಿದ್ದ ಕೀಟನಾಶಕ ಸೇವಿಸಿದ್ದರು. ಕೂಡಲೇ ಮನೆಯವರು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


'ಅನೂಪ್‌ಕುಮಾರ್‌ ಸ್ಥಿತಿ ಗಂಭೀರವಾಗಿದ್ದರಿಂದ ಬಳ್ಳಾರಿ ಆಸ್ಪತ್ರೆಗೆ ಕಳಿಸಲಾಗಿದೆ. ಇನ್ನಿಬ್ಬರು ಯುವಕರಿಗೆ ನಮ್ಮ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದೇವೆ' ಎಂದು ಸಿಂಧನೂರು ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಹನುಮಂತರೆಡ್ಡಿ ತಿಳಿಸಿದರು.


0 تعليقات

إرسال تعليق

Post a Comment (0)

أحدث أقدم