ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಮೆಜಾನ್ ಕಂಪನಿಗೆ ಸೇರಿದ ಕಂಟೈನರ್ ಲಾರಿ ದುಷ್ಕರ್ಮಿಗಳಿಂದ ಅಪಹರಣ

ಆಮೆಜಾನ್ ಕಂಪನಿಗೆ ಸೇರಿದ ಕಂಟೈನರ್ ಲಾರಿ ದುಷ್ಕರ್ಮಿಗಳಿಂದ ಅಪಹರಣ

 


ಬೆಂಗಳೂರು: ಅಮೇಜಾನ್ ಕಂಪನಿಗೆ ಸೇರಿದ ಕಂಟೇನರ್ ಲಾರಿಯನ್ನು ಅಪಹರಿಸಿರುವ ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನಗೊಂಡನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ದೇವನಹಳ್ಳಿ ಮಾರ್ಗವಾಗಿ ಹೊಸಕೋಟೆ ತಾಲೂಕಿನ ಅನಗೊಂಡನಹಳ್ಳಿ ಬಳಿಯ ಫ್ಯಾಕ್ಟರಿಗೆ ತೆರಳುತ್ತಿದ್ದ ಕಂಟೇನರ್ ಲಾರಿಯ ಜಿಪಿಎಸ್ ಕಿತ್ತು ಬಿಸಾಕಿದ್ದು, ಬಳಿಕ ಲಾರಿ ಅಪಹರಿಸಿದ್ದು, ಅದರಲ್ಲಿದ್ದ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಸೇರಿ ಸುಮಾರು ಒಂದುವರೆ ಕೋಟಿ ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. 

ಕಂಟೇನರ್ ಲಾರಿಯನ್ನು ನಾಗಲಾಪುರ ಗೇಟ್ ಬಳಿ ಬಿಟ್ಟು ಖದೀಮರು ಪರಾರಿಯಾಗಿದ್ದಾರೆ. ಲಾರಿ ಚಾಲಕ ಕೂಡ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಎಸ್ ಪಿ ಕಿಶೋರ್ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم