ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಔಷಧೀಯ ಸಸ್ಯಗಳು ಭೂಮಾತೆಯ ಶ್ವಾಸಕೋಶವಿದ್ದಂತೆ: ಡಾ. ಚೂಂತಾರು

ಔಷಧೀಯ ಸಸ್ಯಗಳು ಭೂಮಾತೆಯ ಶ್ವಾಸಕೋಶವಿದ್ದಂತೆ: ಡಾ. ಚೂಂತಾರು


ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಜೂನಿಯರ್ ಕಾಲೇಜು ಬಳಿ ಇರುವ ನಕ್ಷತ್ರವನದಲ್ಲಿ ಸುಬ್ರಹ್ಮಣ್ಯ ಗೃಹರಕ್ಷಕದಳ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಭಾನುವಾರ (ಅ.10) ಜರುಗಿತು. ಸುಮಾರು 50 ವಿವಿಧ ಬಗೆಯ ಔಷಧಿ ಸಸ್ಯಗಳಾದ ಪೇರಳೆ, ಜಂಬು ನೇರಳೆ, ನೇರಳೆ, ರೆಂಜಾ, ನಾಗಸಂಪಿಗೆ, ಹಲಸು, ಅತ್ತಿ, ಎಕ್ಕ ಮುಂತಾದ ಗಿಡಗಳನ್ನು ನೆಡಲಾಯಿತು.


ಸುಬ್ರಹ್ಮಣ್ಯ ದೇವಳದ ಸಿಬ್ಬಂದಿಗಳಾದ ನೋಣಪ್ಪ ಮತ್ತು ದಾಮೋದರ ರವರು ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರಿಗೆ ಗಿಡ ಹಸ್ತಾಂತರಿಸುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಡಾ|| ಮುರಲೀ ಮೋಹನ್ ಚೂಂತಾರು ಅವರು, ಗಿಡಗಳನ್ನು ನೆಟ್ಟು ಪೋಷಿಸಿದಲ್ಲಿ ನಮ್ಮ ಮುಂದಿನ ತಲೆ ಮಾರಿನ ಮಕ್ಕಳು ನಿರಾತಂಕವಾಗಿ ಉಸಿರಾಡಬಹುದು. ಗಿಡ ಮರಗಳೇ ನಮ್ಮ ಭೂಮಾತೆಯ ಶ್ವಾಸಕೋಶವಿದ್ದಂತೆ. ಈ ನಿಟ್ಟಿನಲ್ಲಿ ಔಷಧೀಯ ವನದಲ್ಲಿ ಔಷಧೀಯ ಸಸ್ಯಗಳನ್ನು ನೆಡುವುದರ ಮುಖಾಂತರ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿ ಮತ್ತು ಮಾಲಿನ್ಯರಹಿತ ಪರಿಸರವನ್ನು ನೀಡಿದ ಪುಣ್ಯ ನಮಗೆ ಸಿಗುತ್ತದೆ. ಬರೀ ಗಿಡ ನೆಡುವುದಷ್ಟೇ ಅಲ್ಲ, ಅದನ್ನು ಉಳಿಸಿ, ಬೆಳೆಸಿ ಪೋಷಿಸಬೇಕಾದ ಜವಾಬ್ದಾರಿ ನಮಗಿದೆ. ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಘಟಕದ ಗೃಹರಕ್ಷಕರು ಇತರರಿಗೆ ಮಾದರಿಯಾಗಿರುತ್ತಾರೆ ಎಂದರು.


ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಘಟಕದ ಪ್ರಭಾರ ಘಟಕಾಧಿಕಾರಿ ಹರಿಶ್ಚಂದ್ರ, ಹಿರಿಯ ಗೃಹರಕ್ಷರಾದ ಚಿದಾನಂದ, ನೇತ್ರಾವತಿ, ಲಕ್ಷಣ, ಯೋಗಿಶ್, ಮೋಹಿನಿ, ವಿಜಯ್ ಕುಮಾರ್, ವಿನೋದ್, ವಿಮಲ, ಅಭಿಲಾಷ್, ಲತೀಶ್, ರಾಕೇಶ್ ಮುಂತಾದವರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم