ಮೈಸೂರು: ಮಹಾರಾಜ ಅಗರ್‌ಸೆನ್ ಅವರ ಜಯಂತಿಯು ಸಾಂಪ್ರದಾಯಿಕವಾಗಿ ಪ್ರತಿವರ್ಷ ನವರಾತ್ರಿ ಹಬ್ಬದ ಅಶ್ವಿನಿಯಂದು ಬರುತ್ತದೆ. ಅಗರ್ ಸೇನಾ ಮಹಾರಾಜರಿಂದ ಪ್ರಾರಂಭವಾದ ಈ ಅಗರ್‌ವಾಲ್ ಸಮಾಜದ ದೇಶವಿದೇಶಗಳಲ್ಲಿ ಹಬ್ಬಿರುವ ಸುಮಾರು 50 ಲಕ್ಷಕ್ಕೂ ಹೆಚ್ಚು ಸದಸ್ಯರು ಪ್ರತಿ ವರ್ಷವೂ ಈ ಜಯಂತಿಯನ್ನು ಆಚರಿಸುತ್ತಾರೆ.
ಮೈಸೂರಿನ ಆರ್.ಎಸ್. ನಾಯ್ಡು ನಗರದಲ್ಲಿರುವ ಶ್ರೀ ಕಂಠೇಶ್ವರ ದೇವಸ್ಥಾನದಲ್ಲಿ ಮಾತೆ ಲಕ್ಷ್ಮಿ ಮತ್ತು ಮಹಾರಾಜ ಅಗರ್ಸೆನ್ ಜೀ ಅವರ ಪೂಜೆ ಮೂಲಕ ಮೈಸೂರು ಅಗರ್ವಾಲ್ ಸಮಾಜವು ಜಯಂತಿಯನ್ನು ಆಚರಿಸಿತು.
ಈ ಸಂದರ್ಭದಲ್ಲಿ ಶ್ರೀ ಕಂಠೇಶ್ವರ ದೇವಸ್ಥಾನಕ್ಕೆ 50 ಕುರ್ಚಿಗಳನ್ನು ದಾನವಾಗಿ ನೀಡಲಾಯಿತು.
ದೇವಸ್ಥಾನ ನಿರ್ವಹಣಾ ಸಮಿತಿ ವತಿಯಿಂದ ಸಮಾಜದ ಎಲ್ಲಾ ಸದಸ್ಯರನ್ನು ಸ್ವಾಗತಿಸಲಾಯಿತು ಮತ್ತು ಅಧ್ಯಕ್ಷ ಡಾ. ಎಸ್.ಕೆ. ಮಿತ್ತಲ್ ಅವರನ್ನು ಗೌರವಿಸಲಾಯಿತು.
ಮೈಸೂರು ಅಗರ್ ವಾಲ್ ಸಮಾಜದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀ ಅನಿಲ್ ಮಿತ್ತಲ್, ಶ್ರೀ ರಿತೇಶ್ ಗೋಯಲ್, ಶ್ರೀ ಅರುಣ್ ಜಲುಕಾ, ಶ್ರೀ ಮಹೇಶ್ ಸಿಂಗ್ಲಾ, ಶ್ರೀ ಸುಮಿತ್ ಗುಪ್ತಾ, ಶ್ರೀ ಅರುಣ್ ಅಗರ್ವಾಲ್, ಮತ್ತು ಮಹಿಳಾ ವಿಭಾಗದ ಕುಮಾರಿ ವನಿತಾ, ಶ್ರೀಮತಿ ಬೇಲಾ ಮಿತ್ತಲ್, ಶ್ರೀಮತಿ ನಾಗಮಣಿ ಮೊದಲಾದವರು ಉಪಸ್ಥಿತರಿದ್ದರು. ಅಧ್ಯಕ್ಷ ಡಾ ಎಸ್. ಕೆ. ಮಿತ್ತಲ್ ಅವರು ಭಾಗವಹಿಸಿದ ಎಲ್ಲರನ್ನು ಅಭಿನಂದಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق