ಬಂಟ್ವಾಳ: ಇಲ್ಲಿನ ಕೊಯಿಲದಲ್ಲಿ ರಾಯಿ-ಕೊಯಿಲ -ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 19ನೇ ವರ್ಷ ಪೂಜಿಸಲಾದ ಶಾರದಾ ವಿಗ್ರಹ ಶುಕ್ರವಾರ ಸಂಜೆ ಸರಳ ರೀತಿಯಲ್ಲಿ ಕುದ್ಮಾಣಿ ಹೊಳೆಯಲ್ಲಿ ವಿಸರ್ಜನೆಗೊಂಡಿತು. ಅದ್ದೂರಿ ಶೋಭಾಯಾತ್ರೆಗೆ ಬದಲಾಗಿ ಭಜನೆ ಮತ್ತೆ ಚೆಂಡೆ ವಾದ್ಯದೊಂದಿಗೆ ಸಂಭ್ರಮದ ಮೆರವಣಿಗೆ ನಡೆಯಿತು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಮತ್ತಿತರ ಗಣ್ಯರು ಭೇಟಿ ನೀಡಿದರು. ವೇದಮೂರ್ತಿ ರಾಜಾರಾಮ ಭಟ್, ಟ್ರಸ್ಟಿನ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಮಿತಿ ಅಧ್ಯಕ್ಷ ರಂಜನ್ ಕುಮಾರ್ ಶೆಟ್ಟಿ ಅರಳ, ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಡೊಂಬಯ ಅರಳ, ಅಜಿತ್ ಕುಮಾರ್, ಉಮೇಶ ಡಿ.ಎಂ., ಮನೋಹರ ಕೊಯಿಲ, ಸದಾನಂದ ಗೌಡ ರಾಯಿ, ರಮಾನಾಥ ರಾಯಿ, ಹರೀಶ ಬಾಡಬೆಟ್ಟು, ಸಂತೋಷ್ ಕುಮಾರ್ ಬೆಟ್ಟು, ಪ್ರಶಾಂತ್ ಶೆಟ್ಟಿ, ಶರತ್ ಕೊಯಿಲ, ವಿಶ್ವನಾಥ ಗೌಡ ಮತ್ತಿತರರು ಇದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment