ಸಾಗರ: ತಾಲೂಕಿನ ಜೋಗದ ಮನೆಯ ಸಮೀಪವೇ ಇರುವ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಭಾನುವಾರ ರಾತ್ರಿ ನಡೆದಿದೆ.
ಜೋಗದ ನಿವಾಸಿ ಗಂಗಾಧರ್ (38)ವರ್ಷ ಮೃತ ವ್ಯಕ್ತಿ. ಗಂಗಾಧರ್ ಮದ್ಯವ್ಯಸನಿಯಾಗಿದ್ದು,ನಿನ್ನೆ ರಾತ್ರಿ ಸಹ ವಿಪರೀತ ಕುಡಿದು ಬಂದು ಪತ್ನಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ತದ ನಂತರ ಮನೆಯ ಹೊರಗೆ ಇರುವ ಮರಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಸ್ಥಳಕ್ಕೆ ಜೋಗ ಪೊಲೀಸ್ ಠಾಣೆ ಪಿಎಸ್‌ಐ ನಿರ್ಮಲಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
Post a Comment