ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕದ್ರಿ ಹಿಲ್ಸ್‌ ಲಯನ್ಸ್‌ ಕ್ಲಬ್‌ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಕದ್ರಿ ಹಿಲ್ಸ್‌ ಲಯನ್ಸ್‌ ಕ್ಲಬ್‌ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ



ಮಂಗಳೂರು: ಕದ್ರಿ ಹಿಲ್ಸ್ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಇತ್ತೀಚೆಗೆ ಕದ್ರಿಯಲ್ಲಿ ನಡೆಯಿತು.‌ ಕ್ಲಬ್ ಅಧ್ಯಕ್ಷ ಲಯನ್ ಜಗದೀಶ ಪೈಯವರ ಸಾರಥ್ಯದಲ್ಲಿ ನಡೆದ ಈ ಶಿಬಿರದಲ್ಲಿ ಸುಮಾರು ಅರುವತ್ತೈದು ಮಂದಿ ಭಾಗವಹಿಸಿದರು. ತಪಾಸಣಾ ಕಾರ್ಯವನ್ನು ಕ್ಲಬ್ ಸದಸ್ಯ ಡಾ ಸುರೇಶ ನೆಗಳಗುಳಿ ನಡೆಸಿದ್ದರು. ಇವರೊಡನೆ ಡಾ ರೋಶನಿ ಮೊಂತೆರೋ ಸಹಕಾರ ನೀಡಿದ್ದರು.


ರಕ್ತ ಛಾಪ, ಜ್ವರ ಹಾಗೂ ನಾಡೀ ಗತಿಗಳ ಪರೀಕ್ಷೆಯ ಜೊತೆಗೆ ಅಗತ್ಯವೆನಿಸುವ ಶಿಬಿರಾರ್ಥಿಗಳಿಗೆ ಸೂಕ್ತ ಸಲಹೆಯನ್ನು ನೀಡಲಾಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post