ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧರ್ಮಸ್ಥಳ: ಭಜನಾ ತರಬೇತಿ ಕಮ್ಮಟ 2021: ಅಂಧ ಕಲಾವಿದ ಬಸವರಾಜ್ ಕೆ.ಆರ್ ಭಕ್ತಿ ಗಾನಮಂಜರಿ

ಧರ್ಮಸ್ಥಳ: ಭಜನಾ ತರಬೇತಿ ಕಮ್ಮಟ 2021: ಅಂಧ ಕಲಾವಿದ ಬಸವರಾಜ್ ಕೆ.ಆರ್ ಭಕ್ತಿ ಗಾನಮಂಜರಿ



ಧರ್ಮಸ್ಥಳ: 23 ನೇ ವರ್ಷದ ಭಜನಾ ಕಮ್ಮಟದಲ್ಲಿ ಶಿಬಿರಾರ್ಥಿಯಾಗಿ ಭಾಗವಹಿಸಿದ ಶ್ರೀ ಬಸವರಾಜ್ ಕೆ ಆರ್ ಇವರು ಅಂಧ ಕಲಾವಿದರು, ಇವರು ಭಜನಾ ಕಮ್ಮಟದಲ್ಲಿ ಪೂಜ್ಯ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕಮ್ಮಟದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಅಲ್ಲದೆ ಭಕ್ತಿಗೀತೆ ಹೇಳಿ ರಂಜಿಸಿದರು. ಇವರು ರಸಮಂಜರಿ ಸುಗಮ ಸಂಗೀತ, ವಚನ ಗಾಯನ, ದೇವರ ನಾಮಾವಳಿಯನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.


ಭಜನಾ ತರಬೇತಿಯ ಬಗ್ಗೆ ಕುತೂಹಲವಿದ್ದು ಇಲ್ಲಿಗೆ ಅದರ ಪೂರ್ಣ ಅನುಭವವಾಯಿತು. ಭಜನಾ ಹಾಡುಗಳಿಂದ ಮನ ತುಂಬಿ ಬಂದಿದೆ. 2007 ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಮೂಹಿಕಾ ವಿವಾಹದಲ್ಲಿ ಮದುವೆಯಾಗಿದ್ದು ಇವರಿಗೆ ಪೂಜ್ಯ ಹೆಗ್ಗಡೆಯವರು ತಾಳಿ ಭಾಗ್ಯವನ್ನು ನೀಡಿ ಆಶೀರ್ವದಿಸಿರುತ್ತಾರೆ. ಇವರ ಪತ್ನಿ ಕಸ್ತೂರಿ ಬಾಯಿಯವರು  ಗಾಯಕಿಯಾಗಿದ್ದು ಶಿಬಿರಾರ್ಥಿಯಾಗಿ ಭಾಗವಹಿದ್ದಾರೆ. ಅಂಧ ಮಕ್ಕಳಿಗೆ ಉಚಿತವಾಗಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم