ದೇರೆಬೈಲ್: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ವೆಂಕಟರಮಣ ದೇವಸ್ಥಾನ ಮಂದಾರ ಬೈಲ್ ದೇರೆಬೈಲು ಕೊಂಚಾಡಿಯಲ್ಲಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶ್ರೀ ದೇವರ ಉತ್ಸವ ಪ್ರಯುಕ್ತ ನಡೆಯುವ ಕಾರ್ಯಕ್ರಮ ಈ ಕೆಳಗಿನಂತಿದೆ.
07.10.21 - ಗುರುವಾರ ನವರಾತ್ರಿ ಆರಂಭ ಮೊದಲ ದಿನದ ಪೂಜೆ
08.10.21 - ಶುಕ್ರವಾರ ಬೆಳಿಗ್ಗೆ ತೆನೆ/ ಕೊರಳ ಹಬ್ಬ ಎರಡನೇ ದಿನದ ಪೂಜೆ
09.10.21 - ಶನಿವಾರ ಮೂರನೇ ದಿನದ ಪೂಜೆ
10.10.21 - ಆದಿತ್ಯವಾರ ನಾಲ್ಕನೇ ದಿನದ ಪೂಜೆ ಲಲಿತಾ ಪಂಚಮಿ
11.10.21 - ಸೋಮವಾರ ಐದನೇ ದಿನದ ಪೂಜೆ
12.10.21 - ಮಂಗಳವಾರ ಆರನೇ ದಿನದ ಪೂಜೆ
13.10.21 - ಬುಧವಾರ ಏಳನೇ ದಿನದ ಪೂಜೆ ಚಂಡಿಕಾ ಹೋಮ
14.10.21 - ಗುರುವಾರ ಆಯುಧ ಪೂಜೆ
15.10.21 - ಶುಕ್ರವಾರ ಬೆಳಿಗ್ಗೆ ಅಕ್ಷರಾಭ್ಯಾಸ
ನವರಾತ್ರಿಯ ಸಂದರ್ಭದಲ್ಲಿ ಎಲ್ಲಾ ದಿನಗಳಲ್ಲೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಮತ್ತು ಎಲ್ಲಾ ದಿನಗಳಲ್ಲೂ ಸೇವಾ ರೂಪದಲ್ಲಿ ರಾತ್ರಿ ರಂಗಪೂಜೆ ನಡೆಯುತ್ತದೆ.
ಸರ್ಕಾರದ ಕೋವಿಡ್ 19ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನವರಾತ್ರಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಆಡಳಿತ ಮೊಕ್ತೇಸರ ಮತ್ತು ತಂತ್ರಿವರೇಣ್ಯರೊಂದಿಗೆ ಅರ್ಚಕರು ಹಾಗೂ ಸಿಬ್ಬಂದಿ ವರ್ಗ ಹಾಗೂ ಮಹಿಳಾ ಮಂಡಳಿ, ಭಜನಾ ಮಂಡಳಿ, ಶಿವಳ್ಳಿ ಸ್ಪಂದನ ದೇರೇಬೈಲು ವಲಯ, ಯುವಕ ಮಂಡಳಿಗಳ ಸಹಕಾರದೊಂದಿಗೆ ಉತ್ಸವವನ್ನು ಯಶಸ್ವಿಯಾಗಿ ನೆರವೇರಿಸಲು ತೀರ್ಮಾನಿಸಲಾಗಿದೆ.
ಭಕ್ತಾದಿಗಳು ಶ್ರೀ ದೇವರ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿಸಲಾಗಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق