ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರು ಮತ್ತು ಲಾರಿ ಅಪಘಾತ; ಕಾರು ಚಾಲಕ ಸಾವು

ಕಾರು ಮತ್ತು ಲಾರಿ ಅಪಘಾತ; ಕಾರು ಚಾಲಕ ಸಾವು

 



ಶಿವಮೊಗ್ಗ : ಜಿಲ್ಲೆಯ ಮುದ್ದಿನ ಕೊಪ್ಪ ಗ್ರಾಮದ ಬಳಿಯ ಶಿವಮೊಗ್ಗ - ಸಾಗರ ರಸ್ತೆಯಲ್ಲಿ ಕಾರು ಹಾಗೂ ಲಾರಿಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಿಂದಾಗಿ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವುದು ತಿಳಿದು ಬಂದಿದೆ.


ನಿನ್ನೆ ರಾತ್ರಿ ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯಲ್ಲಿ ಲಾರಿ ಚಾಲಕ ವಾಹನವೊಂದನ್ನು ಓವರ್ ಟೇಕ್ ಮಾಡಲು ಹೋಗಿ, ಏಕಾಏಕಿ ಬಲಭಾಗಕ್ಕೆ ತಿರುಗಿದ್ದರಿಂದಾಗಿ, ಎದುರಿನಿಂದ ಬರುತ್ತಿದ್ದಂತ ಕಾರೊಂದಕ್ಕೆ ಡಿಕ್ಕಿ ಹೊಡೆದಿದೆ.


ಇದರಿಂದಾಗಿ ಕಾರಿನಲ್ಲಿ ಕೆಲಸ ನಿಮಿತ್ತ ಆಯನೂರಿಗೆ ತೆರಳಿ, ವಾಪಾಸ್ ಶಿವಮೊಗ್ಗದ ಸಂಬಂಧಿಕರೊಬ್ಬರ ಮನೆಗೆ ತೆರಳುತ್ತಿದ್ದಂತ ಹೊನ್ನಾಳಿಯ ನಾಗೇಂದ್ರ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದರು.

ಲಾರಿ ಡಿಕ್ಕಿ ಹೊಡೆದದ್ದರಿಂದಾಗಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲನೆ ಮಾಡುತ್ತಿದ್ದಂತ ನಾಗೇಂದ್ರ ಅವರ ಮೃತದೇಹವನ್ನು ಹೊರ ತೆಗೆಯಲು ಜನರು ಹರಸಾಹಸ ಪಡುವಂತಾಗಿತ್ತು. ಈ ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ಹೇಳಲಾಗುತ್ತಿದೆ.



0 تعليقات

إرسال تعليق

Post a Comment (0)

أحدث أقدم