ಕಾಸರಗೋಡು ; ಮೂರು ತಿಂಗಳ ಮಗು ಸಹಿತ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಕಾಸರಗೋಡು ಸಮೀಪದ ನೀಲೇಶ್ವರದಲ್ಲಿ ನಡೆದಿದೆ.
ನೀಲೇಶ್ವರ ಕಡಿಂಞಮೂಲೆಯ ರಮ್ಯಾ (31)ವರ್ಷ, ಮೃತರು ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಮಗು ಸಹಿತ ತಾಯಿ ಬಾವಿಗೆ ಹಾರಿದ್ದಾರೆ. ಮನೆಯವರು ಹಾಗೂ ಸ್ಥಳೀಯರು ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ ಇಬ್ಬರು ಮೃತಪಟ್ಟಿದ್ದಾರೆ.
ಮಾನಸಿಕ ಖಿನ್ನತೆಯಿಂದ ಸಾವನ್ನಪ್ಪಿದರು ಎಂದು ಮಾಹಿತಿ ನೀಡಿದ್ದು, ಈ ಬಗ್ಗೆ ನೀಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment