ಉಪ್ಪಿನಂಗಡಿ : ಬಾಟಲಿಯಲ್ಲಿದ್ದ ಪೆಟ್ರೋಲ್ ಅನ್ನು ನೀರೆಂದು ತಿಳಿದು ಕುಡಿದ ಅಜ್ಜಿ ಮೃತಪಟ್ಟ ಘಟನೆಯೊಂದು ಪೆರ್ನೆ ಸಂಪದಕೋಡಿಯಲ್ಲಿ ಬುಧವಾರ ಸಂಭವಿಸಿದೆ.
ಬಂಟ್ವಾಳದ ಪದ್ಮಾವತಿ (79)ವರ್ಷ ಮೃತರು. ಸೆ.26ರಂದು ಪೆರ್ನೆಯ ಮಗಳ ಮನೆಗೆ ಪದ್ಮಾವತಿ ಬಂದಿದ್ದರು.
ಹುಲ್ಲು ಕತ್ತರಿಸುವ ಯಂತ್ರಕ್ಕೆಂದು ಮನೆಯವರು ಬಾಟಲಿಯಲ್ಲಿ ಪೆಟ್ರೋಲ್ ತಂದಿಟ್ಟಿದ್ದರು.
ಕಣ್ಣಿನ ಸಮಸ್ಯೆಯಾದ ದೃಷ್ಟಿದೋಷದಿಂದ ಬಳಲುತ್ತಿದ್ದ ಅಜ್ಜಿ, ಪೆಟ್ರೋಲ್ ಇದ್ದ ಬಾಟಲಿಯನ್ನು ನೀರೆಂದು ತಿಳಿದು ಕುಡಿದಿದ್ದರು.
ಕೂಡಲೇ ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಕೊನೆಯುಸಿರೆಳೆದರು.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق