ಶಿಲ್ಲಾಂಗ್: ಮೇಘಾಲಯದಲ್ಲಿ ಬಸ್ ನದಿಗೆ ಉರುಳಿ ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ.
ಬುಧವಾರ ಮಧ್ಯರಾತ್ರಿ 21 ಪ್ರಯಾಣಿಕರಿದ್ದ ಬಸ್ಸೊಂದು ಇಲ್ಲಿಯ ರಿಂಗಡಿ ನದಿಗೆ ಉರುಳಿ ಬಿದ್ದಿದೆ.
ಈ ವೇಳೆ 6 ಮಂದಿ ಮೃತಪಟ್ಟಿದ್ದು, ರಕ್ಷಣಾ ತಂಡ ಹಾಗೂ ತುರ್ತು ಕಾರ್ಯಪಡೆ ಸಂತ್ರಸ್ತರ ರಕ್ಷಣಾ ಕಾರ್ಯ ನಡೆಸುತ್ತಿದೆ.
ನಾಲ್ಕು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಎರಡು ದೇಹಗಳು ಬಸ್‌ನಡಿ ಸಿಲುಕಿವೆ ಎಂಬ ಮಾಹಿತಿ ಇದೆ.
16 ಪ್ರಯಾಣಿಕರನ್ನು ರಕ್ಷಿಸಿ ಹತ್ತಿರದ ಪೊಲೀಸ್ ಠಾಣೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಯಾಣಿಸುತ್ತಿದ್ದ ವೇಳೆ ಬಸ್ ಮುಂಭಾಗ ಸೇತುವೆಗೆ ಗುದ್ದಿದ ಹಿನ್ನೆಲೆ ನದಿಗೆ ಉರುಳಿದೆ ಎಂದು ಮೂಲಗಳು ಹೇಳಿವೆ.
ಸಾವಿಗೀಡಾದ ಮೃತರಲ್ಲಿ ಬಸ್ ಚಾಲಕ ಕೂಡ ಒಬ್ಬರಾಗಿದ್ದಾರೆ.
إرسال تعليق