ಮಂಗಳೂರು: ಮಂಗಳೂರು ತಾಲೂಕು ಚುಟುಕು ಪರಿಷತ್ತಿನ ಆನ್ಲೈನ್ ವಿಡಿಯೋ ಕವಿಗೋಷ್ಠಿ ಸರಣಿಯ 15ನೇ ಕಾರ್ಯಕ್ರಮವಾಗಿ 'ಕಥನ ಕಾವ್ಯ (ಕಥನ ಕವನ)' ಎಂಬ ಆನ್ಲೈನ್ ವೀಡಿಯೋ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಕವಿತೆಯ ಮೂಲಕವೇ ಒಂದು ಕಥೆ ಹೆಣೆಯಬೇಕಾದ ಈ ಗೋಷ್ಠಿಯಲ್ಲಿ ಆಸಕ್ತ ಕವಿಗಳು ತಾವು ರಚಿಸಿರುವ ತಮ್ಮ ಸ್ವರಚಿತ ಕಥನಕಾವ್ಯ ವಾಚನ ಮಾಡಿ ವೀಡಿಯೋವನ್ನು ಕಳುಹಿಸಿ ಕೊಟ್ಟು ಭಾಗವಹಿಸಬಹುದು.
ಸುಲಲಿತ ಕಥನ ಕವನ ವಾಚನದ ಆರಂಭದಲ್ಲಿ ತಮ್ಮ ಹೆಸರು, ಊರು, ಜಿಲ್ಲೆಯನ್ನು ಉಲ್ಲೇಖಿಸಬೇಕು. ಕಥನ ಕಾವ್ಯ 28 ಸಾಲುಗಳನ್ನು ಮೀರಬಾರದು. ಕಾವ್ಯದೊಳಗೇ ಒಂದು ನವಿರಾದ ರೂಪಕ/ಕಥೆಯನ್ನು ಹೆಣೆದು ಪ್ರಸ್ತುತ ಪಡಿಸುವ ಅವಕಾಶ ಇದು. ಉಪಮೆಗಳು ಇತ್ಯಾದಿ ಅಲಂಕಾರಗಳನ್ನು ಬಳಸಿದರೆ ಉತ್ತಮ. ವಾಚನದ ಅವಧಿ ಗರಿಷ್ಠ 4 ನಿಮಿಷಗಳು. ತಮ್ಮ ಕಥನ ಕಾವ್ಯ ವಾಚನದ ವಿಡಿಯೋವನ್ನು ಮೊದಲೇ ಸಿದ್ಧಪಡಿಸಿಟ್ಟು 9108425813 ಕ್ಕೆ ವಾಟ್ಸಾಪ್ ಮೂಲಕ ಸೆಪ್ಟೆಂಬರ್ 15ರಂದು ಮಾತ್ರವೇ ವಾಟ್ಸಾಪ್ ಮೂಲಕ ಕಳಿಸಬೇಕು. ಸೆಪ್ಟೆಂಬರ್ 15 ರ ಮೊದಲು ಅಥವಾ ನಂತರ ಕಳಿಸುವ ವೀಡಿಯೋಗಳನ್ನು ಸ್ವೀಕರಿಸುವುದಿಲ್ಲ. ಉತ್ತಮ ಗುಣಮಟ್ಟದ ವಿಡಿಯೋ ಗಳನ್ನು ಮಾತ್ರ ಪರಿಗಣಿಸುತ್ತೇವೆ.
ಅತ್ಯುತ್ತಮ ಆಯ್ದ 25 ಕವಿ-ಕವಯತ್ರಿಯರ ಕಾವ್ಯವಾಚನ ಟೀವಿಯಲ್ಲಿ ಪ್ರಸಾರವಾಗಲಿದೆ. ಯೂ ಟ್ಯೂಬ್ ನಲ್ಲಿ ಎಲ್ಲರ ವಾಚನಗಳೂ ಪ್ರಕಟ ಮಾಡಲಾಗುತ್ತದೆ. ಚಿತ್ರೀಕರಣ ಸಮಯದಲ್ಲಿ ಮೊಬೈಲನ್ನು ಉದ್ದ (Horizontal) (ಎಡದಿಂದ ಬಲ) ಹಿಡಿಯಿರಿ, ಸಾಕಷ್ಟು ಬೆಳಕು ಇರುವಲ್ಲಿ, ಈಯರ್ ಫೋನ್ ಬಳಸಿ ಒಳಾಂಗಣದಲ್ಲಿ ವಿಡಿಯೋ ಚಿತ್ರೀಕರಿಸಬೇಕು. ಧ್ವನಿ ಸ್ಪಷ್ಟವಾಗಿರಲಿ. ಕರೆ ಮಾಡಲು ಅವಕಾಶ ಇರುವುದಿಲ್ಲ.
ಕಳುಹಿಸಿಕೊಡುವ ಕವನ ಈ ಹಿಂದೆ ಸಾಮಾಜಿಕ ಜಾಲತಾಣ, ವಾಟ್ಸಾಪ್ ಬಳಗ, ಪತ್ರಿಕೆಗಳು ಅಥವಾ ಟೀವಿ ಮೊದಲಾದುವುಗಳಲ್ಲಿ ಪ್ರಕಟವಾಗಿರಬಾರದು, ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿರಬಾರದು. ಕವಿತೆಗಳ ಆಯ್ಕೆಯ ಸಂಪೂರ್ಣ ನಿರ್ಧಾರ ಪರಿಷತ್ತಿನದ್ದಾಗಿರುತ್ತದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment