ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮುರ ಅಂಗನವಾಡಿ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ

ಮುರ ಅಂಗನವಾಡಿ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ



ಮಂಗಳೂರು: ದ.ಕ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರ ಪಡುಪೆರಾರ ಗ್ರಾಮ ಪಂಚಾಯತ್ ಮುರ ಬಾಲವಾಡಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಇಂದು (ಸೆ.11) ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಿಕಟಪೂರ್ವ ಜಿ.ಪಂ. ಸದಸ್ಯ ಜನಾರ್ದನ ಗೌಡ ಮುಚ್ಚೂರು, ಪಂಚಾಯತ್ ಅಧ್ಯಕ್ಷರಾದ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾದ ಸೇಸಮ್ಮ, ಮಂಗಳೂರು ಗ್ರಾಮಾಂತರ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಹರೀಶ್ ಕೆ,  ಪಡುಪೆರಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಗ್ಗಪ್ಪ ಮೂಲ್ಯ,  ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ದೇವಕಿ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ಸುಜಾತ ಹಾಗೂ ಪಂಚಾಯತ್ ಚುನಾಯಿತ ಸದಸ್ಯರಾದ ಬಿ.ಎಸ್ ಗಣೇಶ್ ಸಫಲಿಗ ಅಳಿಕೆ, ವಿನೋದ್, ವನಿತಾ, ದೇವಪ್ಪ ಶೆಟ್ಟಿ, ಗಣೇಶ್, ಮೀನಾಕ್ಷಿ, ಯಶವಂತ ಪೂಜಾರಿ, ಸುಜಾತ ಸಫಲಿಗ, ಅರುಣ್ ಕೋಟ್ಯಾನ್, ವಿದ್ಯಾಜೋಗಿ, ಮೋಹಿನಿ, ಸೀತಾರಾಮ, ಜಯಂತ್ ಸಾಲ್ಯಾನ್, ಬಬಿತ ಹಾಗೂ ಭಾ.ಜ.ಪಾ ಎಡಪದವು ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅನಿಲ್ ಕುಮಾರ್, ಮತ್ತು ಭಾ.ಜ.ಪಾ ಮೂಡುಪೆರಾರ ಶಕ್ತಿಕೇಂದ್ರ ಅಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ಪಡುಪೆರಾರ ಶಕ್ತಿಕೇಂದ್ರದ ಅಧ್ಯಕ್ಷರಾದ ಶೇಖರ ಸಫಲಿಗ, ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಊರಿನ ಗಣ್ಯರು, ಮತ್ತು ಅಪಾರ ಸಂಖ್ಯೆಯಲ್ಲಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post