ಮಂಗಳೂರು: ನಗರದ ಬೋಂದೇಲ್‌ನ ಖ್ಯಾತ ಪರಿಸರವಾದಿ, ಶಾಲಾ ಕಾಲೇಜುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ತೋಟಗಾರಿಕೆಯಲ್ಲಿ ತೊಡಗಿರುವ ಕೃಷ್ಣಪ್ಪ ಅವರನ್ನು ಮಂಗಳೂರು ಉತ್ತರ ಇನ್ನರ್ ವೀಲ್ ಕ್ಲಬ್‌ನ ವತಿಯಿಂದ ಇತ್ತೀಚೆಗೆ ಸನ್ಮಾನಿಸಲಾಯಿತು.
ಈವರೆಗೆ ಮಂಗಳೂರಿನಲ್ಲಿ 10000 ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ 84 ವರ್ಷದ ಕೃಷ್ಣಪ್ಪ ರಾಜ್ಯ ಪ್ರಶಸ್ತಿ ಪುರಸ್ಕೃತರು. ವನಮಹೋತ್ಸವ ಕಾರ್ಯಕ್ರಮಕ್ಕಾಗಿ ಪ್ರತಿವರ್ಷ ವಿವಿಧ ಸಾಮಾಜಿಕ ಸಂಸ್ಥೆಗಳಿಗೆ ಅವರು ಹಣ್ಣು ಮತ್ತು ಹೂವುಗಳ ಸಸಿಗಳನ್ನು ಪ್ರಾಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ಸಸಿಗಳನ್ನು ನೆಟ್ಟ ನಂತರ ಕೃಷ್ಣಪ್ಪ ಅವರ ಕೈತೋಟದಲ್ಲೇ ಸನ್ಮಾನಿಸಲಾಯಿತು.
ಮಂಗಳೂರು ಉತ್ತರದ ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ಡಾ.ಭಾರತಿ ಪ್ರಕಾಶ್, ಕಾರ್ಯದರ್ಶಿ ವಸಂತಿ ಕಾಮತ್, ಉಪಾಧ್ಯಕ್ಷೆ ಮೀರಾ ಕೃಷ್ಣ, ಖಜಾಂಚಿ ಗೀತಾ ರೈ ಪೂರ್ವತನ ಅಧ್ಯಕ್ಷೆಯರಾದ ಉಷಾ ಸುಧಾಕರ್ ಮತ್ತು ಸುಧಾ ಜಯರಾಂ, ಜಿಲ್ಲಾ ಐಎಸ್ಒ ರಜನಿ ಭಟ್, ಪರಿಸರ ಯೋಜನೆಗಳ ಸಂಯೋಜಕಿ ಸೀಮಾ ಸಿಂಘ್ವಿ ಹಾಜರಿದ್ದರು.
ಮಂಗಳೂರು ಉತ್ತರದ ಇನ್ನರ್ವೀಲ್ ಕ್ಲಬ್‌ನ ದಾನಿಗಳ ವತಿಯಿಂದ ವತಿಯಿಂದ ಇತ್ತೀಚೆಗೆ ಅಸೈಗೋಳಿಯ ವೃದ್ಧಾಶ್ರಮ 'ಅಭಯಾಶ್ರಮʼಕ್ಕೆ 8 ಕೆಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ಅಧ್ಯಕ್ಷೆ ಡಾ ಭಾರತಿ ಪ್ರಕಾಶ್, ಯೋಜನೆಯ ಸಂಯೋಜಕಿ ಅರುಣಾ ಜಲನ್ ಹಾಜರಿದ್ದರು.
ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ನಿರ್ಗತಿಕ ಮಹಿಳೆಯರಿಗಾಗಿ ಇರುವ ದೇರಳಕಟ್ಟೆ ಮಂಗಳೂರಿನ ಸೇವಾಶ್ರಮಕ್ಕೆ ಸುಮಾರು ರೂ. 6500 ಮೌಲ್ಯದ ದಿನಸಿಯನ್ನು ಪ್ರಾಯೋಜಿಸಿತು. ಅಧ್ಯಕ್ಷೆ ಡಾ ಭಾರತಿ ಪ್ರಕಾಶ್ ಮತ್ತು ಅನಾಥಾಶ್ರಮದ ಸಂಯೋಜಕಿ ಅರುಣಾ ಉಪಸ್ಥಿತರಿದ್ದರು. ಕ್ಲಬ್ ಈಗಾಗಲೇ 5 ಹೆಣ್ಣುಮಕ್ಕಳ ಶಿಕ್ಷಣ ಮತ್ತು ಪ್ರವೇಶಕ್ಕಾಗಿ ಇಂಚರ ಫೌಂಡೇಶನ್ಗೆ ರೂ. 15000 ದೇಣಿಗೆನೀಡುತ್ತಿದೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment