ಕಾರ್ಕಳ : ವಿಪರೀತ ಮಧುಮೇಹ ಹಾಗೂ ಮಾನಸಿಕ ಕಾಯಿಲೆ ಯಿಂದ ಬಳಲುತ್ತಿದ್ದ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಸೆ.20 ರಂದು ಬೆಳಿಗ್ಗೆ ಪೆರ್ವಾಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಕಾರ್ಕಳದ ಎಸ್ ವಿಟಿ ಪಿಯು ಕಾಲೇಜಿನ ಉಪನ್ಯಾಸಕಿ ಮಮತಾ (41 ವರ್ಷ) ಎಂದು ಗುರುತಿಸಲಾಗಿದೆ.
ಕಳೆದ 2 ತಿಂಗಳಿನಿಂದ ವಿಪರೀತ ಮಧುಮೇಹ ಹಾಗೂ ಮಾನಸಿಕ ಕಾಯಿಲೆ ಬಳಲುತ್ತಿದ್ದ ಇವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮಾನಸಿಕ ಒತ್ತಡಕ್ಕೆ ಸರಿಯಾಗಿ ಔಷಧಿ ತೆಗೆದು ಕೊಳ್ಳದ ಇವರು, ಕೆಲವು ದಿನದಿಂದ ಕಾಲೇಜಿಗೂ ಸರಿಯಾಗಿ ಹೋಗುತ್ತಿರಲಿಲ್ಲ ಎನ್ನಲಾಗಿದೆ.
ಉಪನ್ಯಾಸಕಿಯವರ ಮಗ ಶಾಲೆಯಿಂದ ಮನೆಗೆ ಬಂದಾಗ ತಾಯಿ, ಕೊಠಡಿಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق