ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಧನಾತ್ಮಕ ಚಿಂತನೆಗಳು ಸವಾಲುಗಳನ್ನು ಎದುರಿಸಲು ಸಹಕಾರಿ- ಪ್ರೊ. ವೀಣಾ ಬಿ. ಕೆ

ಧನಾತ್ಮಕ ಚಿಂತನೆಗಳು ಸವಾಲುಗಳನ್ನು ಎದುರಿಸಲು ಸಹಕಾರಿ- ಪ್ರೊ. ವೀಣಾ ಬಿ. ಕೆ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರ ಮಟ್ಟದ ವರ್ಚುವಲ್ ವಿಚಾರ ಸಂಕಿರಣ




ಪುತ್ತೂರು: ಧನಾತ್ಮಕ ಚಿಂತನೆಯಿಂದ ನಾವು ಜೀವನದಲ್ಲಿ ಎದುರಾಗುವ ಅನೇಕ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಒತ್ತಡವನ್ನು ಕಡಿಮೆಗೊಳಿಸಬಹುದು. ಪರಿಸರ, ಪರಿಸ್ಥಿತಿ, ಸನ್ನಿವೇಶಗಳು ದಿನದಿಂದ ದಿನಕ್ಕೆ ಬದಲಾಗುತ್ತಿರುತ್ತದೆ. ಈ ಬದಲಾಗುತ್ತಿರುವ ಸನ್ನಿವೇಶಗಳು ನಮ್ಮ ಎದುರು ಅನೇಕ ಸವಾಲುಗಳನ್ನು ಒಡ್ಡಬಹುದು. ಈ ಎಲ್ಲ ಸವಾಲುಗಳನ್ನು ಎದುರಿಸಲು ಇರುವ ಒಂದೇ ಒಂದು ಅಸ್ತ್ರ ಎಂದರೆ, ಅದು ಧನಾತ್ಮಕ ಚಿಂತನೆ. ಧನಾತ್ಮಕ ಚಿಂತನೆಯಿಂದ ಧನಾತ್ಮಕ ಮಾತು ಬೆಳೆಯುತ್ತದೆ, ಧನಾತ್ಮಕ ಮಾತುಗಳಿಂದ ಧನಾತ್ಮಕತೆಯನ್ನು ಅನುಭವಿಸುತ್ತೇವೆ. ಉತ್ತಮ ಜೀವನಶೈಲಿ, ಸಮಯದ ಸದ್ಬಳಕೆ, ಒಳ್ಳೆಯ ಸಂಬಂಧ ಇವುಗಳಿಂದ ನಾವು ಆತ್ಮವಿಶ್ವಾಸ ಮತ್ತು ಧನಾತ್ಮಕ ಚಿಂತನೆಗಳನ್ನು ಬೆಳೆಸಬಹುದು ಎಂದು ಮಂಗಳೂರಿನ ರೋಶನಿ ನಿಲಯ, ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್‌ನ ಸಹಾಯಕ ಪ್ರಾಧ್ಯಾಪಕಿ ಪ್ರೊ. ವೀಣಾ ಬಿ.ಕೆ. ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜು ವಿವೇಕಾನಂದ ಮಹಾವಿದ್ಯಾಲಯ ಹಾಗೂ ಪೆರ್ಲದ ನಳಂದ ಕಲಾ ಮತ್ತು ವಾಣಿಜ್ಯ ಕಾಲೇಜು, ಇವುಗಳ ಆಶ್ರಯದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕ ವಾಣಿಜ್ಯ ವಿಭಾಗಗಳ ಜಂಟಿ ಆಶ್ರಯದಲ್ಲಿ, ‘‘Wings Of Positivity During Pandemic’ ಎಂಬ ವಿಷಯದ ಬಗ್ಗೆ ನಡೆದ ರಾಷ್ಟ್ರಮಟ್ಟದ ವರ್ಚುವಲ್ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ, ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಆದಿತ್ಯವಾರ ಮಾತನಾಡಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಪೆರ್ಲದ ನಳಂದ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಾಣಿಜ್ಯ ಹಾಗೂ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಸುರೇಶ್ ಕೆ. ಎಮ್., ಕರೋನದ ಬಗ್ಗೆ ಅಂಜಿಕೆ ಇಲ್ಲದೆ, ಮುಂಜಾಗೃತ ಕ್ರಮಗಳೊಂದಿಗೆ, ಜಾಗರೂಕತೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ, ಕೊರೋನಾ ಸಂದರ್ಭದಲ್ಲಿಯೂ ಹೊಸವಿಚಾರಗಳನ್ನು ಅರಿತು, ಪರಿಸ್ಥಿತಿಯನ್ನು ಸದ್ಬಳಕೆ ಮಾಡುತ್ತಾ, ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಹೊಸ ಜೀವನಕ್ಕೆ ಕಾಲಿಡಬೇಕು. ಕೊರೋನಾ ಹಲವು ನಷ್ಟಗಳ ಜೊತೆಗೆ ತಂತ್ರಜ್ಞಾನದಲ್ಲಿ ಬೆಳವಣಿಗೆ, ಕೃಷಿಯಲ್ಲಿ ಅಭಿವೃದ್ಧಿ ಇತ್ಯಾದಿ ಹಲವು ಲಾಭಗಳನ್ನೂ ಕೂಡ ಒದಗಿಸಿದೆ ಎಂದು ನುಡಿದರು.


ಈ ಸಂದರ್ಭದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್, ನಳಂದ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಕಿಶೋರ್ ಕುಮಾರ್ ರೈ, ಹಾಗೂ ಐಕ್ಯುಎಸಿ ಘಟಕದ ಸಂಯೋಜಕರು, ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ಸುಮಾರು 500ಕ್ಕೂ ಅಧಿಕ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ವಿವೇಕಾನAದ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರವಿಕಲಾ  ಸ್ವಾಗತಿಸಿದರು. ವಿಭಾಗದ ಉಪನ್ಯಾಸಕ ಶ್ರೀನಾಥ್ ಬಿ ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم