ಮಂಗಳೂರು: ಲಕುಮಿ ಸಿನಿ ಕ್ರಿಯೇಶನ್ಸ್ ಅರ್ಪಿಸುವ ಯುವ ನಿರ್ದೇಶಕ ಶ್ರೀನಿವಾಸ್ ವಿ ಶಿವಮೊಗ್ಗ ನಿರ್ದೇಶನ ಹಾಗೂ ಲ. ಕಿಶೋರ್ ಡಿ ಶೆಟ್ಟಿ ನಿರ್ಮಾಣದಲ್ಲಿ ಮೂಡಿ ಬಂದ "ಅಕ್ಷಮ್ಯ" ಕನ್ನಡ ಚಲನಚಿತ್ರದ ಟೀಸರ್ (ಆಫಿಷಿಯಲ್ ಟ್ರೈಲರ್) ಬಿಡುಗಡೆ ಕಾರ್ಯಕ್ರಮವು ನಗರದ ಮಾಲೆಮಾರ್ ಸಮೀಪದ ಎಸ್‌ಡಿಎಂ ಫಿಲ್ಮ್ ಸ್ಟುಡಿಯೋದಲ್ಲಿ ಬುಧವಾರ ಬೆಳಗ್ಗೆ ನೆರವೇರಿತು.
ಮಂಗಳೂರು ನಗರ ಪೊಲೀಸ್ ಅಯುಕ್ತ ಎನ್. ಶಶಿಕುಮಾರ್ ಅವರು ಟೀಸರ್ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭಕೋರಿದರು. ಗೋಪಾಲಕೃಷ್ಣ ಕೆ. ಸಂಪರ್ಕಾಧಿಕಾರಿ ಪೋಲಿಸ್ ಇಲಾಖೆ, ಚಿತ್ರದ ನಿರ್ದೇಶಕ ಶ್ರೀನಿವಾಸ್ ಶಿವಮೊಗ್ಗ, ನಿರ್ಮಾಪಕ ಕಿಶೋರ್ ಡಿ ಶೆಟ್ಟಿ, ಸಹ ನಿರ್ಮಾಪಕರಾದ ಮೋಹನ್ ಕೊಪ್ಪಲ ಕದ್ರಿ, ಪ್ರಭು ಉಡುಪಿ, ಲೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ರೂಬಿ ಜೋಸ್, ಲೊ ಸಂಕಲನಕಾರ ರಾಹುಲ್ ವಸಿಷ್ಠ, ಎಸ್‌ಡಿಎಂ ಸ್ಟೂಡಿಯೋ ನಿರ್ದೇಶಕರಾದ ವಿಜಯ್ ಕುಮಾರ್, ಜೆಸ್ಸಿ ಸೆಬೇಸ್ಟಿನ್ ಹಾಗೂ ನಾಯಕ ನಟ ಪ್ರಕಾಶ್ ಶೆಟ್ಟಿ, ಕಲಾವಿದರಾದ ಅರುಣ್ ಬಿಸಿ ರೋಡ್, ಹರೀಶ್ ಬಂಗೇರ, ವಿನಾಯಕ್ ಜಪ್ಪು, ವಿಶ್ವಾಸ್ ಗುರುಪುರ, ಸುನೀಲ್ ಅಶೋಕ್ ನಗರ, ಲತೀಫ್ ಸಾಣೂರ್, ಗಣೇಶ್ ರೈ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಕೀರ್ತಿ ಕಾರ್ಯಕ್ರಮ ನಿರೂಪಿಸಿದರು.
ಯುವಪ್ರತಿಭೆಗಳಿಗೆ ಅವಕಾಶ ನೀಡುವ "ಲಕುಮಿ" ತಂಡ:
ಸದಾ ಯುವಪ್ರತಿಭೆಗಳಿಗೆ ಅವಕಾಶ ನೀಡುವ ಲಕುಮಿ ಬ್ಯಾನರ್ ಈ ಬಾರಿಯು ಯುವ ನಿರ್ದೇಶಕನಿಗೆ ಅವಕಾಶವನ್ನು ಕಲ್ಪಿಸಿದೆ. ನಮ್ಮ ಕುಡ್ಲ ಚಿತ್ರದ ಮೂಲಕ ತುಳು ಚಿತ್ರರಂಗಕ್ಕೆ ಪರಿಚಯಗೊಂಡ ಯುವ ನಾಯಕನಟ ಪ್ರಕಾಶ ಶೆಟ್ಟಿ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಲಿದ್ದಾರೆ.
ಯುವ ಛಾಯಾಗ್ರಹಕ ಅವಿನಾಶ್ ಕಾವೂರು ಕ್ಯಾಮರಾದಲ್ಲಿ ಕೈಚಳಕ ತೋರಿಸಿದ್ದಾರೆ. ಇನ್ನು ಚಿತ್ರದಲ್ಲಿ ತುಳು ರಂಗಭೂಮಿಯ ಹೆಸರಾಂತ ಕಲಾವಿದ ಅರುಣ್ ಚಂದ್ರ ಬಿ.ಸಿ ರೋಡ್, ಹರೀಶ್ ಬಂಗೇರ ಆರ್ಲಪದವು ಹಾಗೂ ಕಿರುತೆರೆ ನಟಿ ಸ್ವಾತಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಲತೀಫ್ ಸಾಣೂರ್, ಸುರೇಶ್ ಮಂಜೇಶ್ವರ್, ರಾಜೇಶ್ ಸ್ಕೈಲಾರ್ಕ್, ವಿಶ್ವಾಸ್ ಗುರುಪುರ, ಪ್ರಿಯಾಂಕಾ, ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿರುವ ಇತರ ಕಲಾವಿದರು.
ಚಿತ್ರಕ್ಕೆ ರೂಬಿ ಜೋಸ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ನೀಡಿದ್ದು, ಯುವ ಸಂಕಲನಕಾರ ರಾಹುಲ್ ವಸಿಷ್ಠ ಸಂಕಲನಕಾರನಾಗಿ ತಮ್ಮ ಕೈಚಲಕ ತೋರಿಸಿದ್ದಾರೆ. ತುಳಸಿದಾಸ್ ಮಂಜೇಶ್ವರ, ಮನೋಜ್ ಉಜಿರೆ, ಗಣೇಶ್ ರೈ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق