ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದರ್ಶನ್ ಅಭಿನಯದ 55ನೇ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಅನಾವರಣ

ದರ್ಶನ್ ಅಭಿನಯದ 55ನೇ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಅನಾವರಣ

 



ಬೆಂಗಳೂರು ; ಗಣೇಶ ಹಬ್ಬದ ಸಂತಸದಲ್ಲಿ ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55ನೇ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ.


ಈ ಚಿತ್ರಕ್ಕೆ 'ಕ್ರಾಂತಿ' ಎಂಬ ಹೆಸರಿಟ್ಟಿದ್ದು, ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಈ ಪೋಸ್ಟರ್ ಅನ್ನು ರಿಲೀಸ್ ಮಾಡಲಾಗಿದೆ.


ಈ ಚಿತ್ರವನ್ನು ವಿ. ಹರಿಕೃಷ್ಣ ನಿರ್ದೇಶಿಸುತ್ತಿದ್ದು, ಶೈಲಜಾ ನಾಗ್ ಮತ್ತು ಬಿ. ಸುರೇಶ್ ನಿರ್ಮಾಣ ಮಾಡಲಿದ್ದಾರೆ.


ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ಈ ಸಿನಿಮಾ ಬಿಡುಗಡೆಯಾಗಲಿದೆ. 


ದರ್ಶನ್ ಈ ಪೋಸ್ಟರ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. 

ನಮ್ಮ ಮುಂದಿನ ಚಿತ್ರಕ್ಕೆ 'ಕ್ರಾಂತಿ' ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ.


0 Comments

Post a Comment

Post a Comment (0)

Previous Post Next Post