ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಮಾಲತಿ ಶೆಟ್ಟಿ ಮಾಣೂರು ಅವರು "ರಾಷ್ಟ್ರೀಯ ಕಣ್ಮಣಿ ರಾಷ್ಟ್ರ ಪ್ರಶಸ್ತಿ"ಗೆ ಆಯ್ಕೆ

ಡಾ. ಮಾಲತಿ ಶೆಟ್ಟಿ ಮಾಣೂರು ಅವರು "ರಾಷ್ಟ್ರೀಯ ಕಣ್ಮಣಿ ರಾಷ್ಟ್ರ ಪ್ರಶಸ್ತಿ"ಗೆ ಆಯ್ಕೆ



ಮಂಗಳೂರು: ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ, ಸಾಹಿತಿ, ಸಮಾಜ ಸೇವಕಿ ಡಾ. ಮಾಲತಿ ಶೆಟ್ಟಿ ಮಾಣೂರು ಅವರು ಬೆಂಗಳೂರಿನ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ನೀಡುವ "ರಾಷ್ಟ್ರೀಯ ಕಣ್ಮಣಿ" ರಾಷ್ಟ್ರ ಪ್ರಶಸ್ತಿಗೆ ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ ಆಯ್ಕೆಯಾಗಿದ್ದಾರೆ.


ಪ್ರಶಸ್ತಿ ಪ್ರದಾನ ಸಮಾರಂಭವು ಸೆಪ್ಟೆಂಬರ್ 25ರಂದು ಬೆಂಗಳೂರಿನಲ್ಲಿ ಸಂಸ್ಥೆಯ 29ನೇ ವಾರ್ಷಿಕೋತ್ಸವದ ಸಮಾರಂಭದ ವೇಳೆ ಗಣ್ಯರ ಸಮ್ಮುಖದಲ್ಲಿ ನಡೆಯಲಿದೆ.


ಸಾಹಿತ್ಯ, ಪತ್ರಿಕೋದ್ಯಮ ಕ್ಷೇತ್ರದ ಅಮೋಘ ಸಾಧನೆಗಾಗಿ ನೀಡುವ ಅನೇಕ ಪ್ರಶಸ್ತಿ ಗಳನ್ನು ಈಗಾಗಲೇ ಡಾ.ಮಾಲತಿ ಶೆಟ್ಡಿ ಮಾಣೂರು ಅವರು ಪಡೆದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಿಂದ ಕರುನಾಡ ಸಿರಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ಈವರೆಗೆ 9 ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದಾರೆ. 8 ವರುಷಗಳಿಂದ 'ಅಮೃತ ಪ್ರಕಾಶ' ಎಂಬ ಸದಭಿರುಚಿಯ ಪತ್ರಿಕೆಯನ್ನು ನಡೆಸಿಕೊಂಡು ಬರುತಿದ್ದಾರೆ. ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ಸರಣಿ ಕೃತಿ ಬಿಡುಗಡೆ ಈಗಾಗಲೇ 44 ಕೃತಿಗಳನ್ನು ಬಿಡುಗಡೆಗೊಳಿಸಿದ್ದಾರೆ.


ಕರ್ನಾಟಕ ವಿಕಾಸ ರತ್ನ, ಭಾರತ ಜ್ಯೋತಿ,ರಾಷ್ಟ್ರೀಯ ವಿಭೂಷಣ ರಾಷ್ಟ್ರ ಪ್ರಶಸ್ತಿ, ಕೆಂಗಲ್‌ ಹನುಮಂತಯ್ಯ, ಅಭಿನಂದನ್ ವರ್ತಮಾನ ಪ್ರಶಸ್ತಿ 2019, ಕುದ್ಮುಲ್ ರಂಗರಾವ್, ಸೇರಿದಂತೆ 6 ರಾಜ್ಯ ಪ್ರಶಸ್ತಿ, 2 ರಾಷ್ಟ್ರ ಪ್ರಶಸ್ತಿ ಹಾಗೂ ಹಲವಾರು ಸನ್ಮಾನಗಳು ಪ್ರಾಪ್ತವಾಗಿದೆ. 2018ರಲ್ಲಿ ಗೌರವ ಡಾಕ್ಟರೇಟ್ ಚೆನ್ನೈನಲ್ಲಿ ಪ್ರಾಪ್ತವಾಗಿದೆ. ಕಳೆದ 16 ವರುಷಗಳಿಂದ ಸಾಹಿತ್ಯ, ಪತ್ರಿಕೋದ್ಯಮ, ಸಮಾಜಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಹಿರಿಯ ಯಕ್ಷಗಾನ ಕಲಾವಿದ ಮಾಣೂರಿನ ದಿ. ಕಿಟ್ಟಣ್ಣಶೆಟ್ಟಿ ಹಾಗೂ ರೇವತಿ ಶೆಟ್ಟಿ ಮಾಣೂರು ದಂಪತಿಗಳ ಸುಪುತ್ರಿ. ಪ್ರಸ್ತುತ ಮಂಗಳೂರಿನ ಅತ್ತಾವರ ವೈದ್ಯನಾಥನಗರದಲ್ಲಿ ಪತಿ ಸತ್ಯಪ್ರಕಾಶ್ ಶೆಟ್ಟಿಯವರೊಂದಿಗೆ ವಾಸವಾಗಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post