ಬೀದರ್ : ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಶುಕ್ರವಾರ ನಗರದ ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಸಹಕಾರ ಆಸ್ಪತ್ರೆಯಲ್ಲಿ ಜನಿಸಿದ ಪುತ್ರನಿಗೆ ‘ನರೇಂದ್ರ' ಎಂದು ಹೆಸರಿಟ್ಟು ದಂಪತಿ ಗಮನ ಸೆಳೆದರು.
ಚಿಟಗುಪ್ಪ ತಾಲೂಕಿನ ನಿರ್ಣಾವಾಡಿಯ ಅಂಬಿಕಾ ವೀರಶೆಟ್ಟಿ ರಂಜೇರಿ ದಂಪತಿ ತಮ್ಮ ಮಗನಿಗೆ ನರೇಂದ್ರ ಎಂದು ನಾಮಕರಣ ಮಾಡಿದರು.
ಪ್ರಧಾನಿ ಜನ್ಮದಿನದಂದು ಪುತ್ರ ಜನಿಸಿದ್ದಕ್ಕೆ ಸಂತೋಷವಾಗಿದೆ. ಹೀಗಾಗಿ ಈ ದಿನದ ಸವಿನೆನಪಿಗಾಗಿ ಮಗನಿಗೆ ನರೇಂದ್ರ ಎಂದು ಹೆಸರಿಟ್ಟಿದ್ದೇವೆ ಎಂದು ಅಂಬಿಕಾ ಹೇಳಿದರು.
إرسال تعليق