ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಚಿತ "ಸಂಧಿವಾತ ಮತ್ತು ಸಂದು ನೋವು ತಪಾಸಣಾ ಶಿಬಿರ' ನಾಳೆ (ಸೆ.19)

ಉಚಿತ "ಸಂಧಿವಾತ ಮತ್ತು ಸಂದು ನೋವು ತಪಾಸಣಾ ಶಿಬಿರ' ನಾಳೆ (ಸೆ.19)



ಬೆಂಗಳೂರು: ಬಾಣಸವಾಡಿಯಲ್ಲಿರುವ ಆರ್ಥೋಪೆಡಿಕ್ ಕ್ಲಿನಿಕ್ `ಟೋಟಲ್ ಆರ್ಥೋಕೇರ್' ನಲ್ಲಿ ಸೆಪ್ಟೆಂಬರ್ 19, 2021 ರಂದು ಉಚಿತ "ಸಂಧಿವಾತ ಮತ್ತು ಸಂದು ನೋವು ತಪಾಸಣಾ ಶಿಬಿರ" ವನ್ನು ಏರ್ಪಡಿಸಲಾಗಿದೆ. ಶಿಬಿರವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ.


ಉತ್ತಮ ಜೀವನ ನಡೆಸಲು ಕೀಲುಗಳ ಆರೋಗ್ಯ ಬಹಳ ಮುಖ್ಯ. ಇದನ್ನು ನಿರ್ಲಕ್ಷಿಸುವುದರಿಂದ    ಸಂಧಿವಾತ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಸಂಧಿವಾತದಲ್ಲಿ ಹಲವು ವಿಧಗಳಿವೆ. ಆಹಾರ, ಆಹಾರ ಸೇವನೆ ಪದ್ಥತಿ, ಜೀವನಶೈಲಿ ಮತ್ತು ನಿಯಮಿತವಾದ ವ್ಯಾಯಾಮಗಳಿಂದ ನೀವು ಸಾಮಾನ್ಯ ಸ್ಥಿತಿಗೆ ಮರಳಬಹುದು. ಮೂಳೆ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ  `ಟೋಟಲ್ ಆರ್ಥೋಕೇರ್' ನಲ್ಲಿ ಒಂದೇ ಕಡೆ ಪರಿಹಾರ.


ಮೊದಲ ಬಾರಿಗೆ ಬಂದವರಿಗೆ ಶಿಬಿರದಲ್ಲಿ ತಜ್ಞರಿಂದ ಉಚಿತ ಸಮಾಲೋಚನೆ ಅವಕಾಶವಿದೆ. ಅಲ್ಲದೆ ಯಾವುದೇ ರೀತಿಯ ಸಂದು ನೋವಿನ ಸ್ಕ್ರೀನಿಂಗ್ ಕೂಡ ಮಾಡಿಸಿಕೊಳ್ಳಬಹುದು. ಆರಂಭಿಕ ಹಂತದಲ್ಲೇ ರೋಗ ಪತ್ತೆ ಮಾಡುವ ಜೊತೆಗೆ ಸಂಧಿವಾತದ ಬಗೆಗೆ ಸಮಗ್ರ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಜೀವನಶೈಲಿ ಮತ್ತು ಆಹಾರದ ಬದಲಾವಣೆಯ ಮೂಲಕ ಸಂಧಿವಾತವನ್ನು ತಡೆಯುವ ಅಥವಾ ನಿಯಂತ್ರಿಸುವ ಕುರಿತು ತಿಳಿವಳಿಕೆ ನೀಡಲಾಗುವುದು. ಸಂಧಿವಾತವನ್ನು ನಿಯಂತ್ರಿಸಲು ಲಭ್ಯವಿರುವ ವಿವಿಧ ಚಿಕಿತ್ಸಾ ಪದ್ಧತಿಗಳ ಮಾಹಿತಿಯನ್ನು ಸಹ ನೀಡುವ ಜೊತೆಗೆ ಆ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು.


ನಮ್ಮ ಶಿಬಿರದಲ್ಲಿ ಮುಕ್ತವಾಗಿ ಸಮಾಲೋಚನೆ ನಡೆಸಿ. ನಿಮಗೆ ಸಹಾಯ ಮಾಡಲು ನಾವಿದ್ದೇವೆ.


ಆರೋಗ್ಯಕರ ಸಮಾಜ ಮಾತ್ರ ಸಂತೋಷದ ಸಮಾಜವಾಗಬಹುದು ಎಂದು ನಂಬಿರುವ ನಾವು ಹಾಗಾಗಿ ಉಚಿತವಾಗಿ ಶಿಬಿರವನ್ನು ನಡೆಸುತ್ತಿದ್ದೇವೆ.


ನೋಂದಣಿಗೆ ಕರೆ ಮಾಡಿ +91 7204148290

ದಿನಾಂಕ: ಸೆಪ್ಟೆಂಬರ್ 19, 2021

ಸಮಯ: ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ

ಸ್ಥಳ: ಟೋಟಲ್ ಆರ್ಥೋಕೇರ್, 59ಎ, ಎಂಎನ್ಆರ್ ಕಾಂಪ್ಲೆಕ್ಸ್, ಸ್ಟೀಲ್ ಫ್ಯಾಕ್ಟರಿ ಬಸ್ ನಿಲ್ದಾಣದ ಹತ್ತಿರ, ದೊಡ್ಡ ಬಾಣಸವಾಡಿ, ಬೆಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم