ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡು ವಲಯದ ಸಪ್ಟೆಂಬರ್ ತಿಂಗಳ ಶಾಸನತಂತ್ರ ಸಭೆ

ಕಾಸರಗೋಡು ವಲಯದ ಸಪ್ಟೆಂಬರ್ ತಿಂಗಳ ಶಾಸನತಂತ್ರ ಸಭೆ


ಕಾಸರಗೋಡು: ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿರುವ ಶಾಸನ ತಂತ್ರದ ಮುಳ್ಳೇರಿಯ ಮಂಡಲಾಂತರ್ಗತ ಕಾಸರಗೋಡು ವಲಯದ ಸಪ್ಟೆಂಬರ್ ತಿಂಗಳ ಮಾಸಿಕ ಸಭೆಯು ದಿನಾಂಕ 12/09/2021ರಂದು ಭಾನುವಾರ ಕಾಸರಗೋಡು ವಲಯದ ವಿದ್ಯಾನಗರ ಚಿನ್ಮಯ ಕಾಲನಿಯಲ್ಲಿರುವ ಶ್ರೀಯುತ ವೈ. ವಿ.ರಮೇಶ ಭಟ್ ಯೇತಡ್ಕ ಅವರ ನಿವಾಸದಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿ ಜರುಗಿತು.


ಧ್ವಜಾರೋಹಣ, ಗುರುವಂದನೆ, ಶಂಖನಾದ, ಶಿವಮಾನಸ ಪೂಜಾ ಸ್ತೋತ್ರ ಪಠಣದೊಂದಿಗೆ ವಲಯಾಧ್ಯಕ್ಷ ಶ್ರೀಯುತ ಎಸ್ ಎನ್ ಭಟ್ ಅರ್ಜುನಗುಳಿ ಅವರ ಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾಯಿತು.


ವಲಯ ಕಾರ್ಯದರ್ಶಿ ಶ್ರೀಯುತ ಮಹಾಲಿಂಗೇಶ್ವರ ಭಟ್ ಅವರು ಗತ ಸಭೆಯ ವರದಿಯನ್ನು ವಾಚಿಸಿದರು. ವಲಯ ಕೋಶಾಧಿಕಾರಿ ಶ್ರೀಯುತ ರಮೇಶ ಭಟ್ ಯೇತಡ್ಕ ಲೆಕ್ಕ ಪತ್ರ ಮಂಡಿಸಿದರು.


ಬಳಿಕ ವಿಭಾಗಾವಾರು ವರದಿ ಸಲ್ಲಿಸಲಾಯಿತು. ಮಂಡಲ ಬಿಂದು ಸಿಂಧು ಪ್ರಧಾನ ಶ್ರೀಯುತ ಉಳುವಾನ ಈಶ್ವರ ಭಟ್, ವಲಯದ ಹಿರಿಯ ಗುರಿಕ್ಕಾರರಾದ ಶ್ರೀಯುತ ತೆಕ್ಕೆಕೆರೆ ಶಂಕರನಾರಾಯಣ ಭಟ್ ಹಾಗೂ ಅಖಿಲ ಹವ್ಯಕ ಮಹಾಸಭೆಯ ನಿರ್ದೇಶಕರಲ್ಲೊಬ್ಬರಾದ ಶ್ರೀಯುತ ವೈ. ಕೆ. ಗೋವಿಂದ ಭಟ್ ಉಪಸ್ಥಿತರಿದ್ದರು.


ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರದ ಪ್ರಕ್ರಿಯೆ ನವಂಬರ್ ಬಳಿಕ ನಡೆಯಲಿದ್ದು ಅಲ್ಲಿಯವರೆಗೆ ಹಾಲಿ ಪದಾಧಿಕಾರಿಗಳೇ ಮುಂದುವರಿಯಲಿದ್ದಾರೆಂಬ ಮಹಾಮಂಡಲದ ನಿರ್ದೇಶನವನ್ನು ಸಭೆಗೆ ತಿಳಿಸಲಾಯಿತು.


ದಿನಾಂಕ 08.09.2021ರಂದು ಗುರುಗಳ ವಿಶ್ವ ವಿದ್ಯಾ ಚಾತುರ್ಮಾಸದಂಗವಾಗಿ ಬೆಂಗಳೂರು ಗಿರಿನಗರ ರಾಮಾಶ್ರಮದಲ್ಲಿ ನಡೆದ ವಲಯ ಭಿಕ್ಷೆಯ ಸಂದರ್ಭದಲ್ಲಿ ವಲಯ ಕಾರ್ಯದರ್ಶಿ ಶ್ರೀ ಮಹಾಲಿಂಗೇಶ್ವರ ಭಟ್ ಮನ್ನಿಪ್ಪಾಡಿ ಇವರು ಭಾಗವಹಿಸಿದ ಹಾಗೂ ವಲಯದ ಪರವಾಗಿ ಶ್ರೀ ಟಿ. ಭೀಮ ರವಿ ದಂಪತಿಗಳಿಂದ ಪಾದುಕಾ ಪೂಜೆ ಸೇವೆ ನಡೆದ ವಿವರಗಳನ್ನು ಸಭೆಗೆ ತಿಳಿಸಲಾಯಿತು. 


ಮಹಾಮಂಡಲದ ಸಹಾಯ ನಿಧಿಯಿಂದ ಎಡನೀರು ಘಟಕ ನಿವಾಸಿ ಶ್ರೀ ಅರವಿಂದ ಅವರ ಮನೆ ನಿರ್ಮಾಣಕ್ಕೆ ಗುರುಗಳ ಸ್ವರ್ಣಮಂತ್ಕಾಕ್ಷತೆಯೊಂದಿಗೆ ಧನ ಸಹಾಯ ಬಿಡುಗಡೆ ಯಾದ ವಿವರವನ್ನು ಸಭೆಗೆ ತಿಳಿಸಲಾಯಿತು. ಅಲ್ಲದೆ ವಲಯದ ವತಿಯಿಂದ ಅವರ ಗೃಹನಿರ್ಮಾಣ ಕಾರ್ಯಕ್ಕೆ ಸಹಾಯ ನಿಧಿ ಯೊಂದನ್ನು ರೂಪೀಕರಿಸಲು ತೀರ್ಮಾನಿಸಲಾಯಿತು.


ಕಾರ್ಯಕ್ರಮದ ಕೊನೆಗೆ ವಲಯಾಧ್ಯಕ್ಷರು ಮಾತನಾಡಿ ನಾವೆಲ್ಲರೂ ಪರಸ್ಪರ ಸಹಕಾರದೊಂದಿಗೆ ಗುರುಸೇವಾ ನಿರತರಾಗೋಣವೆಂದು ಕರೆಯಿತ್ತರು. ವಲಯ ಕಾರ್ಯದರ್ಶಿಯವರು ಧನ್ಯವಾದ ಸಮರ್ಪಣೆಗೈದರು.  

ಬಳಿಕ ರಾಮತಾರಕ ಮಂತ್ರ, ಶಾಂತಿ ಮಂತ್ರ, ಶಂಖನಾದದೊಂದಿಗೆ ಸಭೆ ಮುಕ್ತಾಯಗೊಂಡಿತು.

ವರದಿ: ಶಿಷ್ಯ ಮಾಧ್ಯಮ ಕಾಸರಗೋಡು ವಲಯ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم