ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ಸಮರ್ಪಣಾ ಅಭಿಯಾನ

ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ವತಿಯಿಂದ ಸಮರ್ಪಣಾ ಅಭಿಯಾನ



ಕಾವೂರು: ಮಹಾಶಕ್ತಿ ಕೇಂದ್ರ ಕಾವೂರು, 1 ಮತ್ತು 2ರ ವತಿಯಿಂದ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಸೆ. 17 ಮತ್ತು ಗುಜರಾತ್ ಮುಖ್ಯಮಂತ್ರಿಯಾಗಿ 20ನೇ ವರ್ಷಾಚರಣೆ ಪ್ರಯುಕ್ತ 20 ದಿನಗಳ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಇಂದು ಪದವಿನಂಗಡಿ ಬೆನಕ ಸಭವನದಲ್ಲಿ ನಡೆಯಿತು. 


ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮ್ ದಾಸ್ ಬಂಟ್ವಾಳ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಮೋದಿಜಿಯವರ ಜೀವನ ಮತ್ತು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾತನಾಡಿದರು.


20 ದಿನಗಳ ಸೇವೆ ಮತ್ತು ಸಮರ್ಪಣಾ ಅಭಿಯಾನದ ಪ್ರಮುಖರಾದ ಶ್ರೀ ಮಹೇಶ್ ಮೂರ್ತಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಪೂಜಾ ಪ್ರಶಾ೦ತ್ ಪೈ ಪ್ರತಿಜ್ಞಾ ವಿಧಿ ಬೋಧಿಸಿದರು ಮತ್ತು ಪೋಸ್ಟ್ ಕಾರ್ಡ್ ಅಭಿಯಾನಕ್ಕೆ ಚಾಲನೆ ನೀಡಿದರು. 




ವೇದಿಕೆಯಲ್ಲಿ ಅನಂತಕೃಷ್ಣ ಭಟ್ ನಿವೃತ್ತ ಕೆನರಾ ಕಾಲೇಜಿನ ಪ್ರಾಧ್ಯಾಪಕರು, ವಿಶ್ವಹಿಂದೂ ಪರಿಷತ್ತು ಸೇವಾವಿಭಾಗ ಪ್ರಮುಖರು, ಮಂಗಳೂರು ನಗರ ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿಯಾದ ಸಂದೀಪ್ ಪಚ್ಚನಾಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ರಂದೀಪ್ ಕಾಂಚನ್, ಮಂಗಳೂರು ಮಹಾನಗರಪಾಲಿಕೆಯ ಉಪಮೇಯರ್ ಸುಮಂಗಳ ರಾವ್, ಅಭಿಯಾನದ ಸಹ ಪ್ರಮುಖರಾದ ಶ್ರೀಮತಿ ಚಂದ್ರಿಕಾ ಪ್ರಭಾಕರ್,  ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿಗಾರ್, ಮಂಡಲ ಉಪಾಧ್ಯಕ್ಷರು ಶ್ರೀಮತಿ ಬಬಿತಾ ರವೀಂದ್ರ, ಮಂಡಲ ಕಾರ್ಯದರ್ಶಿ ಶ್ರೀ ಸುಚೆತನ್ ಕಾವೂರು ಉಪಸ್ಥಿತರಿದ್ದರು.


ಮಂಗಳೂರು ಮಹಾನಗರ ಪಾಲಿಕೆಯ ಸದಾಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಅವರು ಸ್ವಾಗತಿಸಿದರು. ಫಲಾನುಭವಿಗಳ ಪ್ರಕೋಷ್ಠ ಮಂಗಳೂರು ಉತ್ತರ ಮಂಡಲದ ಸಂಚಾಲಕರು ಪ್ರಶಾಂತ್ ಪೈ ಕಾರ್ಯಕ್ರಮ ನಿರೂಪಣೆ  ನಡೆಸಿಕೊಟ್ಟರು. ಧನ್ಯವಾದ ಸಮರ್ಪಣೆಯನ್ನು ಮಹಾ ಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಜ್ವಲ್ ಕಾವೂರು ನಡೆಸಿಕೊಟ್ಟರು.


ಈ ಕಾರ್ಯಕ್ರಮದಲ್ಲಿ ಮಂಡಲ ಪದಾಧಿಕಾರಿಗಳು, ಮ.ನ.ಪಾ ಸದಸ್ಯರು, ಮಹಾಶಕ್ತಿಕೇಂದ್ರ ಪ್ರಮುಖರು, ವಿವಿಧ ಮೋರ್ಚದ ಪದಾಧಿಕಾರಿಗಳು, ಪ್ರಕೋಷ್ಠದ ಸಂಚಾಲಕರು ಮತ್ತು ಸಹ ಸಂಚಾಲಕರು, ಶಕ್ತಿಕೇಂದ್ರ ಪ್ರಮುಖ್ ಸಹ ಪ್ರಮುಖ್, ಬೂತ್ ಅಧ್ಯಕ್ಷರು ಕಾರ್ಯದರ್ಶಿಗಳು, ಕಾರ್ಯಕರ್ತರು ಮತ್ತು ಸಾಮಾಜಿಕ ಮುಖಂಡರು ವಿವಿಧ ದೇವಸ್ಥಾನದ ಪ್ರಮುಖರು, ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ  ಯಶಸ್ವಿಗೊಳಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم