ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕ ನಮಿಪ-ಯಕ್ಷ ಗಣಪ: ವಿಶೇಷ ಕಾರ್ಯಕ್ರಮ ನಾಳೆ ಸಂಜೆ

ವಿವೇಕ ನಮಿಪ-ಯಕ್ಷ ಗಣಪ: ವಿಶೇಷ ಕಾರ್ಯಕ್ರಮ ನಾಳೆ ಸಂಜೆ

ವಿವೇಕಾನಂದ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ ಗಣೇಶ ಚತುರ್ಥಿ ವಿಶೇಷ ಕಾರ್ಯಕ್ರಮ



ಪುತ್ತೂರು: ಗಣೇಶ ಚತುರ್ಥಿ ಪ್ರಯುಕ್ತ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಮತ್ತು ಉಪನ್ಯಾಸಕರ ಸಹಕಾರದಿಂದ ವಿವೇಕ ನಮಿಷ-ಯಕ್ಷ ಗಣಪ ಎಂಬ ಗಾನ ನಾಟ್ಯ ಸಂದೇಶ ಕಾರ್ಯಕ್ರಮವು ಯುಟ್ಯೂಬ್‍ನಲ್ಲಿ ಬಿತ್ತರಗೊಳ್ಳಲಿದೆ. ಈ ಕಾರ್ಯಕ್ರಮವು ಸಪ್ಟೆಂಬರ್ 10 ರಂದು ಸಂಜೆ ಐದು ಗಂಟೆಗೆ ಪ್ರಸಾರವಾಗಲಿದೆ.


ಹಾಡುಗಾರಿಕೆಯಲ್ಲಿ ವಿದ್ಯಾರ್ಥಿಗಳಾದ ಶ್ರೇಯಾ ಎ, ಚೆಂಡೆಯಲ್ಲಿ ಅಂಬಾತನಯ ಅರ್ನಾಡಿ, ಮದ್ದಳೆಯಲ್ಲಿ ಲಕ್ಷ್ಮೀಶ ಭಟ್, ಚಕ್ರತಾಳದಲ್ಲಿ ನವೀನಕೃಷ್ಣ, ನಾಟ್ಯದಲ್ಲಿ ದೇವಿಕಾ ಕುರಿಯಾಜೆ ಹಾಗೂ ಭಾರ್ಗವಿ, ಸಂದೇಶದಲ್ಲಿ ಕೃತಿ ಸನ್ಮಯಾ ಐ ಕೆ, ಆಶ್ರಯಾ, ಪೃಥ್ವಿ ಎಂ ಆರ್ ತಮ್ಮ ಸಹಕಾರವನ್ನು ನೀಡಿರುತ್ತಾರೆ.


ಈ ಕಾರ್ಯಕ್ರಮದ ಪರಿಕಲ್ಪನೆ ಮತ್ತು ನಿರ್ದೇಶನವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್, ಸಮನ್ವಯಕಾರರಾಗಿ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಜಯಶಾಸ್ತ್ರಿ, ಸಂಕಲನಕಾರರಾಗಿ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋದ ತಂತ್ರಜ್ಞ ಸಂತೋಷ್ ನಿರ್ವಹಿಸಿರುತ್ತಾರೆ. ಕಾರ್ಯಕ್ರಮಕ್ಕೆ ಉಪನ್ಯಾಸಕ ದೇವಿಚರಣ್ ರೈ, ಶಿವಾನಂದ, ಚೇತನ್ ತಮ್ಮ ಸಹಕಾರವನ್ನು ನೀಡಿರುತ್ತಾರೆ. ಚಿತ್ರೀಕರಣದಲ್ಲಿ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋ, ಡ್ರೋನೋಗ್ರಫಿಯಲ್ಲಿ ವಿದ್ಯಾರ್ಥಿ ಲಕ್ಷ್ಮೀ ಅರ್ಪಣ್ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ.


ನಿಗದಿಪಡಿಸಲಾದ ಸಮಯದಲ್ಲಿ https://youtu.be/C4FJperDIH8 ಲಿಂಕ್ ಓಪನ್ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವಿದೆ. ಅದೇ ರೀತಿ ಯುಟ್ಯೂಬ್‍ನಲ್ಲಿ vpuc Puttur ಎಂದು ಸರ್ಚ್ ಮಾಡಿದರೂ ಆಯ್ಕೆ ಲಭ್ಯವಿರುತ್ತದೆ. 


0 تعليقات

إرسال تعليق

Post a Comment (0)

أحدث أقدم