ಬೆಳಗಾವಿ: ಕಾಲೇಜು ವಿದ್ಯಾರ್ಥಿಗಳಿಬ್ಬರು ಪಾರ್ಟಿ ಮುಗಿಸಿ ತಡರಾತ್ರಿ ಮನೆಗೆ ಹಿಂತಿರುಗುವ ವೇಳೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯೊಂದು ಬೆಳಗಾವಿ ಹೊರವಲಯದಲ್ಲಿ ನಡೆದಿದೆ.
ನಗರದ ಚವಾಟ್ ಗಲ್ಲಿಯ ಶ್ರೀನಾಥ ಪವಾರ್(21) ವರ್ಷ ಹಾಗೂ ಸದಾಶಿವ ನಗರದ ರಚಿತ್ ಡುಮಾವತ್(21) ವರ್ಷ ಅಪಘಾತದಲ್ಲಿ ಮೃತಪಟ್ಟ ಯುವಕರು.
ಈ ಇಬ್ಬರು ವಿದ್ಯಾರ್ಥಿಗಳು ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಈ ಇಬ್ಬರು ಯುವಕರು ನಿನ್ನೆ ರಾತ್ರಿ ಪಾರ್ಟಿ ಮಾಡಲು ಕಾಕತಿ ಬಳಿಯ ಢಾಬಾಗೆ ಹೋಗಿದ್ದರು.
ಪಾರ್ಟಿ ಮುಗಿದ ಬಳಿಕ ಪುಣೆ-ಬೆಂಗಳೂರು ಹೆದ್ದಾರಿ ಮಾರ್ಗವಾಗಿ ನಗರಕ್ಕೆ ಬೈಕ್ ನಲ್ಲಿ ವಾಪಸ್ಸಾಗುತ್ತಿರುವ ವೇಳೆ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಇವರ ಬೈಕ್ ರಭಸವಾಗಿ ಡಿಕ್ಕಿ ಹೊಡೆದಿದೆ.
ಪರಿಣಾಮ ಸವಾರಿಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಈ ಘಟನೆ ಬಗ್ಗೆ ಬೆಳಗಾವಿಯ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق