ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಎಡನೀರು: ಗಮಕ ವಾಚನ- ವ್ಯಾಖ್ಯಾನ ಸರಣಿ ಇಂದು ಕೊನೆಯ ದಿನ

ಎಡನೀರು: ಗಮಕ ವಾಚನ- ವ್ಯಾಖ್ಯಾನ ಸರಣಿ ಇಂದು ಕೊನೆಯ ದಿನ


ಎಡನೀರು: ಸಿರಿಗನ್ನಡ ವೇದಿಕೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ತು ಈ ಎರಡು ಸಂಸ್ಥೆಗಳ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಈ ವರ್ಷ ಕಾಸರಗೋಡು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ಗಮಕ ವಾಚನ- ವ್ಯಾಖ್ಯಾನ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಎಡನೀರು ಮಠದಲ್ಲಿ ಶ್ರೀ ಶ್ರೀಗಳ ಚಾತುರ್ಮಾಸ ಸಭಾಂಗಣದಲ್ಲಿ ಇಂದು ಸಂಜೆ 4 ಗಂಟೆಗೆ ಹಮ್ಮಿಕೊಳ್ಳಲಾಗಿದೆ.  


ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಸನ್ನಿಧಿಯಲ್ಲಿ ಶ್ರೀಶ್ರೀಗಳ ಆಶೀರ್ವಚನಗಳೊಂದಿಗೆ ನಡೆಯುವ ಈ ಸಮಾರಂಭದಲ್ಲಿ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಶ್ರೀ ತೆಕ್ಕೆಕೆರೆ ಶಂಕರನಾರಾಯಣ ಭಟ್ಟರು ಅಧ್ಯಕ್ಷತೆ ವಹಿಸಲಿರುವರು. ಕಾಸರಗೋಡು ಕರ್ನಾಟಕ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಶ್ರೀ ಕೆ.ಯಂ.ಬಳ್ಳಕ್ಕುರಾಯ ಅವರು ಸಮಾರೋಪ ಭಾಷಣ ಮಾಡಲಿರುವರು.  


ಈ ಸಂದರ್ಭದಲ್ಲಿ ಶಿಕ್ಷಕಿ ಕುಮಾರಿ ಅನುಷಾ ಎಸ್.ಮಯ್ಯ ಅವರು ತೊರವೆ ರಾಮಾಯಣದ ಆಯ್ದ ಭಾಗದ ವಾಚನವನ್ನು ಮಾಡಲಿರುವರು. ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಹಾಗೂ ಗಮಕ ಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶ್ರೀ ವಿ.ಬಿ.ಕುಳಮರ್ವ ಅವರು ವ್ಯಾಖ್ಯಾನ ಮಾಡಲಿರುವರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم