ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಷ ಅಣಬೆ ಸೇವಿಸಿ ಬಾಲಕ ಸಾವು, ಸಹೋದರ, ಸಹೋದರಿ ಗಂಭೀರ

ವಿಷ ಅಣಬೆ ಸೇವಿಸಿ ಬಾಲಕ ಸಾವು, ಸಹೋದರ, ಸಹೋದರಿ ಗಂಭೀರ

 


ವಾರ್ಸಾ : ಇತ್ತೀಚೆಗೆ ಅಫ್ಗಾನ್ನಿಂದ ಸ್ಥಳಾಂತರಗೊಂಡು ಪೋಲಂಡ್ ನ ನಿರಾಶ್ರಿತರ ಶಿಬಿರದಲ್ಲಿದ್ದ 5 ವರ್ಷದ ಅಫ್ಗಾನ್ ಬಾಲಕ ವಿಷ ಅಣಬೆ ಸೇವಿಸಿ ಮೃತಪಟ್ಟಿದ್ದು, ಆತನ 6 ವರ್ಷದ ಸಹೋದರನ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.


ವಾರ್ಸಾ ಬಳಿಯ ಪೊಡ್ಕೊವಾ ಲೆನ್ಸಾ ಎಂಬಲ್ಲಿ ಬಾಲಕನ ಕುಟುಂಬವರು ನೆಲೆಸಿದ್ದ ನಿರಾಶ್ರಿತರ ಶಿಬಿರದ ಬಳಿಯ ಕಾಡಿನ ಹತ್ತಿರದಲ್ಲಿ ಭಾರೀ ವಿಷ ಹೊಂದಿರುವ ಅಣಬೆ ಬೆಳೆದಿದ್ದು ಬಾಲಕ, ಆತನ ಸಹೋದರ ಮತ್ತು ಸಹೋದರಿ ತಿಂದಿದ್ದಾರೆ. 


ಇದರಿಂದ ಬಾಲಕ ಮೃತಪಟ್ಟಿದ್ದು, ಆತನ ಸಹೋದರ ಮತ್ತು ಸಹೋದರಿ ತೀವ್ರ ಅಸ್ವಸ್ಥರಾಗಿದ್ದಾರೆ. 


ಸಹೋದರನಿಗೆ ಕರುಳು ಕಸಿ ಚಿಕಿತ್ಸೆ ನಡೆಸಲಾಗಿದೆ. ಆತ ಚೇತರಿಸಿಕೊಳ್ಳಬಹುದು, ಆದರೆ ಮೆದುಳಿಗೆ ತೀವ್ರ ಹಾನಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.


0 تعليقات

إرسال تعليق

Post a Comment (0)

أحدث أقدم