ಉಜಿರೆ: ಧರ್ಮಸ್ಥಳದಲ್ಲಿ ನೂತನ “ಸಿರಿ” ಮಳಿಗೆಯನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಗುರುವಾರ ಉದ್ಘಾಟಿಸಿ ಶುಭ ಹಾರೈಸಿದರು.
ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಉತ್ತಮ ಗುಣಮಟ್ಟದ ಸಿದ್ಧ ಉಡುಪುಗಳು, ತಿಂಡಿಗಳು, ಗೃಹಬಳಕೆಯ ವಸ್ತುಗಳು, ಶೃಂಗಾರ ಸಾಧನಗಳು, ಅಲಂಕಾರಿಕ ವಸ್ತುಗಳು ಮಳಿಗೆಯಲ್ಲಿ ಲಭ್ಯ ಇವೆ.
ಗ್ರಾಹಕರ ಅನುಕೂಲಕ್ಕಾಗಿ ವಾರದ ಏಳು ದಿನಗಳಲ್ಲಿಯೂ ಬೆಳಿಗ್ಯೆ ಗಂಟೆ 6.30 ರಿಂದ ರಾತ್ರಿ 10ರ ವರೆಗೆ ಮಳಿಗೆ ತೆರೆದಿರುತ್ತದೆ.
ಉಡುಪಿ, ಮಂಗಳೂರು, ಧಾರವಾಡ, ಹಾಸನ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 15 “ಸಿರಿ” ಮಳಿಗೆಗಳನ್ನು ತೆರೆಯಲಾಗಿದೆ. ಆನ್‍ಲೈನ್ ಖರೀದಿ ಸೌಲಭ್ಯವೂ ಇದೆ ಎಂದು “ಸಿರಿ” ಸಂಸ್ಥೆಯ ಆಡಳಿತ ನಿರ್ದೇಶಕ ಕೆ.ಎನ್. ಜನಾರ್ದನ್ ತಿಳಿಸಿದ್ದಾರೆ.
ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಎಸ್.ಡಿ.ಎಂ. ಆಸ್ಪತ್ರೆಯ ಆಡಳಿತಾಧಿಕಾರಿ ಎಂ. ಜನಾರ್ದನ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಮಂಗಳೂರಿನ ಕುಸುಮಾ ದೇವಾಡಿಗ ಮತ್ತು ಕೆ. ಮಹಾವೀರ ಅಜ್ರಿ, ಹಾಗೂ ಸಿರಿ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment