ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೂಡುಬಿದಿರೆ: "ವೇದ ಗಣಿತ- ಈಜಿ ಟ್ರಿಕ್ಸ್" ಕಾರ್ಯಾಗಾರ

ಮೂಡುಬಿದಿರೆ: "ವೇದ ಗಣಿತ- ಈಜಿ ಟ್ರಿಕ್ಸ್" ಕಾರ್ಯಾಗಾರ



ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ವತಿಯಿಂದ "ವೇದ ಗಣಿತ- ಈಜಿ ಟ್ರಿಕ್ಸ್" ಕಾರ್ಯಾಗಾರವು ಗುರುವಾರ ನಡೆಯಿತು.


ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹೈದರಾಬಾದಿನ ಸಿಗ್ಮಾ ಐಎಎಸ್ ಅಕಾಡೆಮಿಯ ನಿರ್ದೇಶಕ ಬಿ. ರಾಮ್‍ಪಾಲ್ ರೆಡ್ಡಿ ಮಾತನಾಡಿ, ಗಣಿತದಲ್ಲಿ ಎಷ್ಟೋ ಪರಿಣತಿಯನ್ನು ಹೊಂದಿದ್ದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗಣಿತ ಜ್ಞಾನಕ್ಕಿಂತ ನಿಗದಿತ ಸಮಯದಲ್ಲಿ ಉತ್ತರವನ್ನು ಕಂಡುಹಿಡಿಯುವ ಕೌಶಲ್ಯ ಮುಖ್ಯವಾಗುತ್ತದೆ ಎಂದರು.

ಸ್ನಾತಕೋತ್ತರ ಗಣಿತ ವಿಭಾಗದ ಮುಖ್ಯಸ್ಥ ದೀಪಕ್ ಕೆ. ಎಸ್ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದರು.


ಈ ಸಂದರ್ಭ, ಸ್ನಾತಕೋತ್ತರ ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಗಣೇಶ್ ಎಚ್. ಎನ್., ಸಿಡ್ನಾ ರೀಮಾ ಸೆರೆವೋ, ಧನ್ಯಶ್ರೀ ಅಧಿಕಾರಿ, ಪದವಿ ಗಣಿತ ಉಪನ್ಯಾಸಕರಾದ ಕಿಶೋರ್, ವೀರ ಕ್ರಾಸ್ತ, ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಯುಪಿಎಸ್ಸಿ ತರಬೇತಿ ಕೇಂದ್ರದ ಸಂಯೋಜಕ  ಡಾ ಅಶೋಕ್ ಡಿಸೋಜಾ, ಸ್ನಾತಕೋತ್ತರ ಗಣಿತ ಹಾಗೂ ಪದವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಉಪನ್ಯಾಸಕ ವೇದಮೂರ್ತಿ ಎಚ್. ಎಂ ಸಂಪನ್ಮೂಲ ವ್ಯಕ್ತಿಯ ಪರಿಚಯಿಸಿದರು. ವಿದ್ಯಾರ್ಥಿನಿ ರಂಜಿತಾ ಶೆಣೈ ಕಾರ್ಯಕ್ರಮವನ್ನು ನಿರೂಪಿಸಿದರು.


0 Comments

Post a Comment

Post a Comment (0)

Previous Post Next Post