ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಕಕ್ಕಿಂತ ಕೌಶಲ್ಯವೇ ಅತಿ ಮುಖ್ಯ: ಬಾಲಕೃಷ್ಣ ಸಾರಡ್ಕ

ಅಂಕಕ್ಕಿಂತ ಕೌಶಲ್ಯವೇ ಅತಿ ಮುಖ್ಯ: ಬಾಲಕೃಷ್ಣ ಸಾರಡ್ಕ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಎಂ.ಕಾಂ. ವಿಭಾಗದಿಂದ ವೆಬಿನಾರ್


ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಕಾಲೇಜಿನ ಐಕ್ಯೂಎಸಿ ಘಟಕದ ಜಂಟಿ ಆಶ್ರಯದಲ್ಲಿ ‘ಉದ್ಯೋಗ ನೇಮಕಾತಿಗೆ ಬೇಕಾದ ಕೌಶಲ್ಯಗಳು ಮತ್ತು ತಯಾರಿಗಳು’ (skills and preparations for job interview :redefine) ಎಂಬ ವಿಷಯದ ಬಗ್ಗೆ ಮಂಗಳವಾರ ವೆಬಿನಾರ್ ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ Tektronix ಟಿಪಿಎಸ್ ಇಂಡಿಯಾ ಲಿಮಿಟೆಡ್ ಬೆಂಗಳೂರು ಇಲ್ಲಿನ ಸೀನಿಯರ್ ಸಾಫ್ಟ್ವೇರ್ ಡಿಸೈನ್ ಇಂಜಿನಿಯರ್ ಆಗಿರುವ ಬಾಲಕೃಷ್ಣ ಸಾರಡ್ಕ ಮಾತನಾಡಿ, ಪ್ರಸ್ತುತ ಕೋವಿಡ್ ಸಂದರ್ಭದಲ್ಲಿ ಅಂಕಕ್ಕಿಂತ ಕೌಶಲ್ಯವೇ ಅತಿಮುಖ್ಯ ಎಂದು ಅಭಿಪ್ರಾಯಪಟ್ಟರು.



ಉದ್ಯೋಗ ಕ್ಷೇತ್ರಕ್ಕೆ ತಯಾರಾಗುವ ರೀತಿ, ಬೇರೆಬೇರೆ ಉದ್ಯೋಗಾವಕಾಶಗಳು, ಬೆಳೆಸಿಕೊಳ್ಳಬೇಕಾದ ಕೌಶಲ್ಯ ಸಾಮರ್ಥ್ಯ ಮುಂತಾದ ವಿಷಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದ ಇವರು ವಿದ್ಯಾರ್ಥಿಗಳೊಂದಿಗೆ ಈ ಕುರಿತಾಗಿ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರಿಸಿದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣುಗಣಪತಿ ಭಟ್, ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಕೆ.ಎಸ್. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕಿ ಡಾ. ವಿಜಯ ಸರಸ್ವತಿ, ಉಪನ್ಯಾಸಕರಾದ ಲಕ್ಷ್ಮಿ ಭಟ್, ರಾಘವೇಂದ್ರ, ವರ್ಷಿತ್, ಶ್ವೇತಾ ರಾವ್ ಮೊದಲಾದವರು ಉಪಸ್ಥಿತರಿದ್ದರು.


ಎಂ.ಕಾಂ ವಿದ್ಯಾರ್ಥಿನಿಯರಾದ ಮನಿಷಾ ಶೆಟ್ಟಿ ಸ್ವಾಗತಿಸಿ, ಲೇಖನ ಸಂಪನ್ಮೂಲ ವ್ಯಕ್ತಿಯ ಪರಿಚಯವನ್ನು ನೀಡಿದರು. ಅನುಶ್ರೀ ವಂದಿಸಿ, ಕವನ ಕಾರ್ಯಕ್ರಮ ನಿರೂಪಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post