ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬುಧವಾರ ನಾರಾವಿಯಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿಗೆ ಬಸದಿಗೆ ಹೋಗಿ ದೇವರ ದರ್ಶನ ಮಾಡಿದರು.
ಬಳಿಕ ಬಸದಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಕ್ಷುಲ್ಲಿಕಾ ಸುಶ್ರೇಯಾಮತಿ ಮಾತಾಜಿ ಅವರ ದರ್ಶನ ಮಾಡಿ ಆಶೀರ್ವಾದ ಪಡೆದರು.
ಚಾತುರ್ಮಾಸ್ಯ ಸಮಿತಿಯ ಎನ್. ಪ್ರೇಮ್ ಕುಮಾರ್, ಹೊಸ್ಮಾರು, ಶಿಶುಪಾಲ ಜೈನ್, ಪ್ರಕಾಶ್ ಕುಮಾರ್, ಶಶಿಕಾಂತ ಜೈನ್, ಸನ್ಮತ್ ಕುಮಾರ್, ನಾಗಕುಮಾರ ಶೆಟ್ಟಿ, ಜಯವರ್ಮ ಬುನ್ನು, ಅಶೋಕ ಕುಮಾರ್, ಒರಿಮಾರು, ರಾಜೇಂದ್ರ ಕುಮಾರ್, ಜಯವರ್ಮ ಜೈನ್, ನಿಖಿಲ್ ಮತ್ತು ಅಜಿತ್ ಕುಮಾರ್ ಹೆಗ್ಗಡೆಯವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق