ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮನನೊಂದು ದಂಪತಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆ

ಮನನೊಂದು ದಂಪತಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆ

 




ದೊಡ್ಡಬಳ್ಳಾಪುರ: ದಂಪತಿ ಇಬ್ಬರೂ ಮನನೊಂದು ವಿಷ ಕುಡಿದು ಮೃತಪಟ್ಟಿರುವ ಘಟನೆಯೊಂದು ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದಲ್ಲಿ ನಡೆದಿದೆ.


ಮಾರೇಗೌಡ (62 ವರ್ಷ) ಮತ್ತು ಇವರ ಪತ್ನಿ ಗಂಗಮ್ಮ (55 ವರ್ಷ) ಮೃತಪಟ್ಟವರು.


ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಹಿರಿಯ ಮಗ ರಿಸರ್ವ್ ಪೊಲೀಸ್ ವಿಭಾಗದಲ್ಲಿ ಇನ್ಸ್​​ಪೆಕ್ಟರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ತಮ್ಮ ಗ್ರಾಮದಲ್ಲೇ ಪತ್ನಿ ಜತೆ ನೆಲೆಸಿದ್ದಾರೆ.


ಅಂಗವಿಕಲರಾದ ಮಾರೇಗೌಡರನ್ನು ಪತ್ನಿ ಗಂಗಮ್ಮ ನೋಡಿಕೊಳ್ಳುತ್ತಿದ್ದರು. ಮಕ್ಕಳಿಬ್ಬರೂ ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. 


 ಇತ್ತೀಚೆಗೆ ಕಿರಿಯ ಮಗ ತನ್ನ ಹೆಂಡತಿ ಮನೆಯವರಿಗೆ ಗೀಸರ್ ಕೊಡಿಸಿದ್ದನಂತೆ. ಈ ವಿಚಾರವಾಗಿ ಅಪ್ಪ-ಅಮ್ಮ ಮತ್ತು ಮಗನ ನಡುವೆ ಜಗಳ ಕೂಡ ಆಗಿತ್ತಂತೆ. 


ಈ ಕಾರಣದಿಂದ ವಿಷ ಕುಡಿದು ಒದ್ದಾಡುತ್ತಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದರು ಬದುಕಲಿಲ್ಲ.

0 Comments

Post a Comment

Post a Comment (0)

Previous Post Next Post