ದೊಡ್ಡಬಳ್ಳಾಪುರ: ದಂಪತಿ ಇಬ್ಬರೂ ಮನನೊಂದು ವಿಷ ಕುಡಿದು ಮೃತಪಟ್ಟಿರುವ ಘಟನೆಯೊಂದು ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದಲ್ಲಿ ನಡೆದಿದೆ.
ಮಾರೇಗೌಡ (62 ವರ್ಷ) ಮತ್ತು ಇವರ ಪತ್ನಿ ಗಂಗಮ್ಮ (55 ವರ್ಷ) ಮೃತಪಟ್ಟವರು.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದು, ಹಿರಿಯ ಮಗ ರಿಸರ್ವ್ ಪೊಲೀಸ್ ವಿಭಾಗದಲ್ಲಿ ಇನ್ಸ್ಪೆಕ್ಟರ್ ಆಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಿರಿಯ ಮಗ ತಮ್ಮ ಗ್ರಾಮದಲ್ಲೇ ಪತ್ನಿ ಜತೆ ನೆಲೆಸಿದ್ದಾರೆ.
ಅಂಗವಿಕಲರಾದ ಮಾರೇಗೌಡರನ್ನು ಪತ್ನಿ ಗಂಗಮ್ಮ ನೋಡಿಕೊಳ್ಳುತ್ತಿದ್ದರು. ಮಕ್ಕಳಿಬ್ಬರೂ ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ.
ಇತ್ತೀಚೆಗೆ ಕಿರಿಯ ಮಗ ತನ್ನ ಹೆಂಡತಿ ಮನೆಯವರಿಗೆ ಗೀಸರ್ ಕೊಡಿಸಿದ್ದನಂತೆ. ಈ ವಿಚಾರವಾಗಿ ಅಪ್ಪ-ಅಮ್ಮ ಮತ್ತು ಮಗನ ನಡುವೆ ಜಗಳ ಕೂಡ ಆಗಿತ್ತಂತೆ.
ಈ ಕಾರಣದಿಂದ ವಿಷ ಕುಡಿದು ಒದ್ದಾಡುತ್ತಿದ್ದ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದರು ಬದುಕಲಿಲ್ಲ.
إرسال تعليق