ಬೆಂಗಳೂರು ; ದೇವರಚಿಕ್ಕನ ಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು, ಓರ್ವ ವ್ಯಕ್ತಿ ಸಜೀವ ದನಹವಾಗಿರುವ ಘಟನೆಯೊಂದು ನಡೆದಿದೆ.
ಬೆಂಗಳೂರಿನ ದೇವರಚಿಕ್ಕನಹಳ್ಳಿ ಯಲ್ಲಿರುವಂತ ಅಶ್ರೀತ ಅಪಾರ್ಟ್ಮೆಂಟ್ ನಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ.
ಇದರಿಂದಾಗಿ ಒಂದು ಫ್ಲ್ಯಾಟ್ ಸಂಪೂರ್ಣವಾಗಿ ಸುಟ್ಟು ಹೋಗಿದೆಂದು ಮಾಹಿತಿ ತಿಳಿದು ಬಂದಿದೆ.
ಫ್ಲ್ಯಾಟ್ ನಲ್ಲಿ ದಿಢೀರ್ ಸಿಲಿಂಡರ್ ಸ್ಪೋಟದಿಂದಾಗಿ ಓರ್ವ ವ್ಯಕ್ತಿ ಸಜೀವವಾಗಿ ದಹನವಾಗಿರುವುದು ತಿಳಿದು ಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
Post a Comment