ಹಾವೇರಿ: ವೃದ್ಧ ತಂದೆಯ ಮೇಲೆ ಮಕ್ಕಳಿಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯೊಂದು ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ನಡೆದಿದೆ.
ಯಲ್ಲಪ್ಪ ವಡ್ಡರ ಎಂಬ 70 ವರ್ಷದ ವೃದ್ಧನ ಮೇಲೆ ಆತನ ಮಕ್ಕಳಾದ ಆನಂದ, ಜಗದೀಶ ಎನ್ನುವವರು ಇಷ್ಟ ಬಂದಂತೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ವೃದ್ಧ ತಂದೆ ರಸ್ತೆಯಲ್ಲೇ ಪ್ರಜ್ಞಾಹೀನ ಸ್ಥಿತಿ ತಲುಪಿದರು.
ತೀವ್ರವಾಗಿ ಗಾಯಗೊಂಡ ವೃದ್ಧನನ್ನು ಗ್ರಾಮಸ್ಥರು ಹಾವೇರಿ ಜಿಲ್ಲಾಸ್ಪತ್ರೆಗೆ ಸೇರಿಸಿದರು.
ಯಾವ ಕಾರಣಕ್ಕಾಗಿ ಹೊಡೆದರು ಎಂಬ ಮಾಹಿತಿ ಲಭ್ಯವಾಗಿಲ್ಲ.
ಈ ಬಗ್ಗೆ ಕಾಗಿನೆಲೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
إرسال تعليق