ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಾ. ಕಡಂಗೋಡ್ಲು ಸೀತಾರಾಮ ಭಟ್ ನಿಧನ

ಡಾ. ಕಡಂಗೋಡ್ಲು ಸೀತಾರಾಮ ಭಟ್ ನಿಧನ



ಉಡುಪಿ: ಪ್ರಸಿದ್ಧ ದಂತವೈದ್ಯ, ಕರಂಬಳ್ಳಿ ವಲಯ ವ್ಯಾಪ್ತಿಯ ಪೆರಂಪಳ್ಳಿ (ಮಣಿಪಾಲ ಕಂಟ್ರಿ ಇನ್ ಹೋಟೆಲ್ ಸಮೀಪ) ನಿವಾಸಿ ಡಾ. ಕಡಂಗೋಡ್ಲು ಸೀತಾರಾಮ ಭಟ್ಟರು ಬುಧವಾರ (ಆ. 25) ನಿಧನ ಹೊಂದಿದ್ದಾರೆ.


ಕನ್ನಡದ ಪಂಡಿತ ಪರಂಪರೆಯ ಧೀಮಂತ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದ ಕೀರ್ತಿಶೇಷ ಕಡಂಗೋಡ್ಲು ಶಂಕರ ಭಟ್ಟರ ಸುಪುತ್ರರಾಗಿದ್ದ ಸೀತಾರಾಮ ಭಟ್ಟರಿಗೆ 85 ವರ್ಷ ಪ್ರಾಯವಾಗಿತ್ತು.


ಮಣಿಪಾಲದ ಕೆಎಂಸಿ ದಂತ ವೈದ್ಯ ಕಾಲೇಜಿನ ಸ್ಥಾಪನೆ ಮತ್ತು ಅಭಿವೃದ್ಧಿಯಲ್ಲಿ ಅಗ್ರಗಣ್ಯ ಪಾತ್ರವಹಿಸಿದ್ದ ಭಟ್ಟರು ಸದ್ರಿ ಸಂಸ್ಥೆಯ ಡೀನ್ ಆಗಿ ಸುದೀರ್ಘ 22 ವರ್ಷ ಸೇವೆ ಸಲ್ಲಿಸಿದ್ದು ಸಂಸ್ಥೆಯ ಇತಿಹಾಸದಲ್ಲೇ ಒಂದು ದಾಖಲೆ.


ಆಸ್ಟ್ರಿಯಾ ಮೊದಲಾದ ದೇಶಗಳಲ್ಲೂ ಅನೇಕ ವರ್ಷ ದಂತ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ವರ್ಷಗಳಿಂದ ಮಣಿಪಾಲದಲ್ಲೇ ನೆಲೆಸಿದ್ದರು. ಅನೇಕ ಸಾಮಾಜಿಕ ಕಾರಣಗಳಿಗಾಗಿ ನನಗೆ ಆತ್ಮೀಯರೂ ಆಗಿದ್ದರು.


ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯ ಸದಸ್ಯತ್ವ ಅಭಿಯಾನದ ಬಗ್ಗೆ ತಿಳಿಸಿದ್ದಾಗ ಸಂತೋಷ ಪಟ್ಟು ಸದಸ್ಯತನ ಸ್ವೀಕರಿಸಲು ಬಯಸಿದ್ದರು. ಆದರೆ ಆ ನಂತರ ಎರಡು ಬಾರಿ ಅವರಲ್ಲಿಗೆ ಹೋಗಿದ್ದಾಗ ಅವರು ವಿದೇಶದಲ್ಲಿದ್ದರು. ಹಾಗಾಗಿ ಅದು ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಬೇಸರ ಇದೆ.


ಉಡುಪಿ ಹವ್ಯಕ ಸಭಾದ ಅಧ್ಯಕ್ಷರೂ ಆಗಿದ್ದರು. ತಮ್ಮ ತಂದೆಯವರ ಹೆಸರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ದೊಡ್ಡ ಮೊತ್ತದ ಪ್ರಶಸ್ತಿಯನ್ನು ಸ್ಥಾಪಿಸಿ ಯೋಗ್ಯ ಸಾಧಕರಿಗೆ ನೀಡುತ್ತಿದ್ದರು. ಅವರ ಸುಪುತ್ರನೂ ವೈದ್ಯರಾಗಿದ್ದಾರೆ.


✍️ ಜಿ ವಾಸುದೇವ ಭಟ್ ಪೆರಂಪಳ್ಳಿ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم