ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಮೂಲಸ್ಥಾನ, ಪ್ರಕೃತಿ ರಮಣೀಯ ತಾಣ. ಜಾಂಬ್ರಿ ಗುಹಾ ಪರಿಸರವನ್ನು ನಾನಿಂದು ಅವಲೋಕಿಸಿದಾಗ ...
ಇದೇ ತಿಂಗಳು ಆಗೋಸ್ಟ್ ಒಂದರಂದು ಪಾಣಾಜೆ ಗ್ರಾಮ ಪಂಚಾಯತು ನೇತ್ರತ್ವದಲ್ಲಿ, ಎರಡೂ ರಾಜ್ಯಗಳ ಪರಿಸರ ಪ್ರೇಮಿಗಳ ಸಹಯೋಗದಲ್ಲಿ, ಸ್ವಚ್ಚತಾ ಕಾರ್ಯಕ್ರಮ ಅದ್ಭುತವಾಗಿ ಜರುಗಿ, ಇಡೀ ಪರಿಸರವನ್ನು ಸ್ವಚ್ಛಗೊಳಿಸಲಾಗಿತ್ತು. ಪಾಣಾಜೆ ಪಂಚಾಯತು ವತಿಯಿಂದ 3 ಕಡೆಗಳಲ್ಲಿ ಸುಂದರವಾದ ಕಸದ ತೊಟ್ಟಿಗಳನ್ನು ಇರಿಸಿ, ತೊಟ್ಟಿಗಳಲ್ಲಿಯೇ ಕಸವನ್ನು/ತ್ಯಾಜ್ಯವನ್ನು ಹಾಕಿ, ಪರಿಸರವನ್ನು ಶುದ್ಧವಾಗಿರಿಸಲು, ಸ್ವಚ್ಚವಾಗಿರಿಸಲು ಮನವಿ ಮಾಡಲಾಗಿತ್ತು.
ಆಹಾ ಎಂತಹ ಅದ್ಭುತ ಪ್ರತಿಕ್ರಿಯೆ ಜನರಿಂದ, ಪ್ರವಾಸಿಗರಿಂದ. ಇಡೀ ಪರಿಸರವನ್ನು ಇಂದು ಮತ್ತೊಮ್ಮೆ ಅವಲೋಕಿಸಿದೆ. ಸ್ವಚ್ಛ... ಸ್ವಚ್ಛ... ಸ್ವಚ್ಛ.. ಎಲ್ಲಿಯೂ ಕಸಗಳಿಲ್ಲ, ತ್ಯಾಜ್ಯಗಳಿಲ್ಲ. ಪ್ರವಾಸಿಗರು, ಕಸದ ತೊಟ್ಟಿಗಳನ್ನೇ ಬಳಸುತ್ತಿದ್ದಾರೆ. ಎಲ್ಲಿಯೂ ಪ್ಲಾಸ್ಟಿಕ್ ತ್ಯಾಜ್ಯಗಳಾಗಲೀ, ಬಾಟಲುಗಳಾಗಲಿ ನನ್ನ ಕಣ್ಣಿಗೆ ಬಿದ್ದಿಲ್ಲ. ಜನ ಎಚ್ಚೆತ್ತುಕೊಂಡರೆ, ಅರಿತುಕೊಂಡರೆ, ಏನೂ ಮಾಡಬಹುದು, ಏನೂ ಸಾಧಿಸಬಹುದು.
ಆಗಬೇಕಾಗಿರುವ ಕಾರ್ಯಗಳು
1) ಕೋಳಿ ತ್ಯಾಜ್ಯಗಳನ್ನು ಎಸೆದ ಸ್ಥಳವನ್ನು ಮಣ್ಣು ಹಾಕಿ ಮುಚ್ಚುವುದೆಂದು ನಿರ್ಣಯಿಸಿದ್ದರೂ ಕಾರ್ಯರೂಪಕ್ಕೆ ಇನ್ನೂ ಬಂದಿಲ್ಲ.
2) ಅರಣ್ಯ ಇಲಾಖೆಯ ಅನುಮತಿಯಂತೆ ಎಚ್ಚರಿಕೆಯ ಫಲಕಗಳನ್ನು ಅಲ್ಲಲ್ಲಿ ಅಳವಡಿಸಲು ಇನ್ನೂ ಬಾಕಿಯಿದೆ.
ಇರುವುದೊಂದೇ ಜಾಂಬ್ರಿ, ಸ್ವಚ್ಛವಾಗಿಡೋಣ. ಪರಿಸರವನ್ನು ರಕ್ಷಿಸೋಣ.
-ಗಿಳಿಯಾಲು ಮಹಾಬಲೇಶ್ವರ ಭಟ್ (ತಾತ ಗಿಳಿಯಾಲು)
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment